ರಾಮಚಂದ್ರಾಪುರ ಮಠ ನಡೆಸುತ್ತಿರುವ ಗೋಸಂರಕ್ಷಣೆ ಕುರಿತ ಜನಜಾಗೃತಿ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ದ.ಕ, ಉಡುಪಿ, ಕಾಸರಗೋಡುಗಳನ್ನು ಒಳಗೊಂಡ ಮಂಗಳೂರು ಹೋಬಳಿಯ ಪ್ರಮುಖ ಮಠವಾದ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀರಾಮ ಸಂಸ್ಕೃತ ವೇದಪಾಠಶಾಲೆಯ ವಾರ್ಷಿಕೋತ್ಸವ ಮತ್ತು ಸೂತ್ರಸಂಗಮ ಕಾರ್ಯಕ್ರಮದಲ್ಲಿ ಗುರುವಾರ ಅವರು ಆಶೀರ್ವಚನ ನೀಡಿದರು.
ಮಲೆಮಹದೇಶ್ವರ, ಹಾರೋಹಳ್ಳಿಯಲ್ಲಿ ಮಠದ ನೇತೃತ್ವದಲ್ಲಿ ನಡೆಯುತ್ತಿರುವ ಆಂದೋಲನಕ್ಕೆ ಜನರು ಕೈಜೋಡಿಸುತ್ತಿದ್ದಾರೆ ಎಂದರು.
ಪಾರಂಪರಿಕ ವಿಚಾರಗಳಿಗೆ, ಮೌಲ್ಯಗಳಿಗೆ ಬೆಲೆ ನೀಡಬೇಕು. ಕೇವಲ ಅನುಕೂಲದ ಹಿಂದೆ ಓಡುವ ಬದಲು ಪರಂಪರೆಯಂತೆ ನಡೆದರೆ, ಆರೋಗ್ಯಕ್ಕೂ ಒಳ್ಳೆಯದು, ಪರಂಪರೆಯನ್ನೂ ಉಳಿಸಿದಂತಾಗುತ್ತದೆ ಎಂದು ಶ್ರೀಗಳು ಹೇಳಿದರು.
ಶ್ರೀ ಮಠದಲ್ಲಿ ಮೂರು ತಲೆಮಾರಿನ ಗುರುಗಳ ಸೇವೆ ಸಲ್ಲಿಸಿದ್ದ ಉಂಚಗೇರಿ ಸುಬ್ರಹ್ಮಣ್ಯ ಶಾಸ್ತ್ರಿಗಳ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಮಂಗಳೂರು ಹವ್ಯಕ ಮಂಡಲದ ಮಾಹಿತಿ ಕೈಪಿಡಿಯನ್ನು ಬಿಡಗಡೆಗೊಳಿಸಲಾಯಿತು. ವೇದ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ಪುರಸ್ಕಾರ, ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಧನಸಹಾಯ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು. ವಿವಿಧ ಯೋಜನೆಗಳಿಗೆ ಧನ ಸಹಾಯ ಹಾಗೂ ಬೆಳೆ ಸಮರ್ಪಣೆ ನಡೆಸಲಾಯಿತು.
ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯ ಮೊದಲ ಬಹುಮಾನ ಅನುಪಮಾ ಉಡುಪಮೂಲೆ, ದ್ವೀತೀಯ ಬಹುಮಾನ ಅಕ್ಷತಾ ಕೈಯಂಕೋಡ್ಲು, ತೃತೀಯ ಬಹುಮಾನ ಸಾವಿತ್ರಿ ರಮೇಶ್ ಭಟ್ ಗಳಿಸಿದರು. ಉತ್ತರಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರ ಗುರೂಜಿ ಉಪಸ್ಥಿತರಿದ್ದರು.
ಶ್ರೀ ರಾಮಚಂದ್ರಾಪುರ ಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ವರದಿವಾಚಿಸಿದರು. ಕಾರ್ಯದರ್ಶಿ ಬಂಗಾರಡ್ಕ ಜನಾರ್ಧನ ಭಟ್ ಲೆಕ್ಕಪತ್ರ ಮಂಡಿಸಿದರು. ಮಂಗಳೂರು ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು, ಮಠ ಸೇವಾ ಸಮಿತಿ ಕೋಶಾಕಾರಿ ಮೈಕೆ ಗಣೇಶ್ ಭಟ್, ವೇದಪಾಠ ಶಾಲೆಯ ಮುಖ್ಯ ಶಿಕ್ಷಕರು ಕಾಂಚನ ಕೃಷ್ಣ ಕುಮಾರ, ಮಿತ್ತೂರು ಶ್ರೀನಿವಾಸ ಭಟ್, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅಶೋಕ ಕೆದ್ಲ, ಕಾರ್ಯದರ್ಶಿ ಶ್ರೀಧರ ಭಟ್ ಕೂವೆತ್ತಂಡ ಸಹಕರಿಸಿದರು.