ಕರೋಪಾಡಿ ಗ್ರಾಮದ ಪಂಬತ್ತಜೆ – ಪನೆಯಡ್ಕ ಎಂಬಲ್ಲಿ ಆಕಸ್ಮಿಕವಾಗಿ ಕಾಡಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಮರಗಳು ಆಹುತಿಯಾಗಿವೆ.
ಮಧ್ಯಾಹ್ನ ವೇಳೆ ಕಾಡಿನೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯರು ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆಗ್ನಿಶಾಮಕ ದಳದ ವಾಹನದಲ್ಲಿ ಒಂದು ಟ್ಯಾಂಕ್ ನೀರು ಖಾಲಿಯಾದರೂ ಬೆಂಕಿ ಮಾತ್ರ ನಿಯಂತ್ರಣಕ್ಕೆ ಬಂದಿರಲಿಲ್ಲ. ಬಳಿಕ ಸ್ಥಳೀಯ ಬಾವಿಯಿಂದ ನೀರು ಸಂಗ್ರಹಿಸಿ ನೀರು ಹರಿಸಿ ಆರಿಸಿದರು. ಎಕರೆಗಟ್ಟಲೇ ಅರಣ್ಯದಲ್ಲಿದ್ದ ಮರಗಳು ಬೆಂಕಿಗಾಹುತಿಯಾಗಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)