ಕಲ್ಲಡ್ಕ ಶ್ರೀರಾಮ ಪದವಿಪೂರ್‍ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ’ದೀಪ ಪ್ರದಾನ’ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಹಿರಿಯಡಗಲದ ಶ್ರೀ ಅಭಿನವ ಹಾಲಸ್ವಾಮೀಜಿ ಮಹಾಸಂಸ್ಥಾನ ಪೀಠಾಧಿಪತಿ ಉಪಸ್ಥಿತರಿದ್ದು ಆಶೀರ್‍ವಾದ ಮಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಬೆಳೆಸಿಕೊಳ್ಳುವ ಮೌಲ್ಯವು ಜೀವನದ ಕೊನೆಯವರೆಗೂ ಉಳಿಯುವಂತದ್ದು, ಅವುಗಳನ್ನು ಬೆಳೆಸಿಕೊಳ್ಳುವುದು ಅಗತ್ಯ. ಶ್ರೀರಾಮ ವಿದ್ಯಾಕೇಂದ್ರದಲ್ಲಿನ ವಿದ್ಯಾರ್ಥಿಗಳ ಅಚ್ಚುಕಟ್ಟಿನ ರೀತಿ ನೀತಿಯನ್ನು ನೋಡಿ ಸಂತಸ ವ್ಯಕ್ತಪಡಿಸಿ ಹಿರಿಯರಾದ ಡಾ| ಪ್ರಭಾಕರ್ ಭಟ್ ಅವರಿಂದ ಎಳವೆಯಲ್ಲಿಯೇ ಪ್ರಭಾವಿತನಾಗಿದ್ದೆ ಎಂದರು.
ಇನ್ನೋರ್ವ ಅತಿಥಿ ಗುರುಮೀತ್ ಸಿಂಗ್ ನವದೆಹಲಿ ಇವರು ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳ ಆಚಾರ- ವಿಚಾರಗಳನ್ನು ಪ್ರಶಂಸಿಸಿದರು.
ತಿರುವನಂತಪುರಂ ಅನಂತ ಪದ್ಮನಾಭದೇವಸ್ಥಾನದ ಟ್ರಸ್ಟಿಯಾಗಿರುವ ಪ್ರಸಾದ್ ಪನಿಕ್ಕರರವರು ಗುರುಕುಲ ರೀತಿಯಲ್ಲಿ ನಡೆಯುವ ವಿದ್ಯಾರ್ಜನೆಯನ್ನು ಶ್ಲಾಘಿಸಿದರು.
ಕಾರ್‍ಯಕ್ರಮದಲ್ಲಿ ರಾಜ್ಯ ಬಿಜೆಪಿ ಪೇರೆಂಟ್ಸ್ ಬಾಡಿ ಮೆಂಬರ್ ಕಿಶೋರ್ ಕುಮಾರ್, ದಾಮೋದರ ಶೆಣೈ ಪಡುಬಿದ್ರಿ, ಪ್ರತಿಭಾ ಪಡುಬಿದ್ರಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಸಂಚಾಲಕರಾದ ವಸಂತ ಮಾಧವ, ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಡಾ| ಕಮಲಾ ಪ್ರಭಾಕರ್ ಭಟ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರಾಂಶುಪಾಲರಾದ ವಸಂತ ಬಲ್ಲಾಳ್ ಶ್ರೀಮಾನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಶರಣ್ಯ ಕಾರ್‍ಯಕ್ರಮ ನಿರೂಪಿಸಿ. ವಾತ್ಸಲ್ಯ ವಂದಿಸಿದರು.