ಬಂಟ್ವಾಳ

ಬೃಹತ್ ಜಲಾಲಿಯ್ಯ ವಾರ್ಷಿಕ ಕಾರ್ಯಕ್ರಮ

 

ಜಲಾಲಿಯ್ಯ ಮಸ್ದಿದ್ ಚಟ್ಟೆಕ್ಕಲ್ ಸಜೀಪ ಶ್ರಯದಲ್ಲಿ ಪ್ರತೀ ಇಂಗ್ಲೀಷ್ ತಿಂಗಳ ಮೊದಲನೆಯ ಗುರುವಾರ ಅಸ್ತ ಶುಕ್ರವಾರ ರಾತ್ರಿ ನಡೆಯುವ ಜಲಾಲಿಯ್ಯ ಮಜ್ಲಿಸಿನ 5ನೇ ಬೃಹತ್ ಜಲಾಲಿಯ್ಯ ವಾರ್ಷಿಕ ಕಾರ್‍ಯಕ್ರಮ ಜಲಾಲಿಯ್ಯ ಮಸ್ದಿದ್ ಚಟ್ಟೆಕ್ಕಲ್ ಸಜೀಪ ಪೊಸೋಟ್ ತಂಜಳ್ ವೇದಿಕೆಯಲ್ಲಿ ಮಾ7ರಿಂದ ಆರಂಭಗೊಂಡಿದ್ದು, 11 ರವರೆಗೆ ನಡೆಯಲಿದೆ. ಮಾ.7ರಂದು ಬೆಳಿಗ್ಗೆ 7 ಗಂಟೆಗೆ ದ್ವಜಾರೋಹಣ ನಡೆಯಿತು. ಮಾ.8ರಂದು ರಿಫಾಯಿಯ್ಯ ದಫ್ ರಾತೀಬ್ , ಮಾ.9ರಂದು ಖವಾಲಿ,ಮಾ 10ರಂದು  ಜುಮಾ ಉದ್ಘಾಟನೆ, ಸಂಜೆ 4.30 ಕ್ಕೆ ಸ್ನೇಹ ಸಂಗಮ ಮಾ.11ರಂದು ರಾತ್ರಿ ೮ಕ್ಕೆ ಜಲಾಲಿಯ್ಯ ಮಜ್ಲಸ್ ಮತ್ತು ಬುರ್ದಾ ಮಜ್ಲಸ್ ಕಾರ್‍ಯಕ್ರಮ ನಡೆಯಲಿದೆ . ಈ ಕಾರ್‍ಯಕ್ರಮದಲ್ಲಿ ಉಸ್ತುವಾರಿ ಸಚಿವ ಬಿ.ರಮನಾಥ ರೈ, ಆಹಾರ ಸಚಿವ ಯು.ಟಿ ಖಾದರ್, ಮಾಣಿಲ ಶ್ರಿ ಧಾಮದ ಮೋಹನದಾಸ ಸ್ವಾಮೀಜಿ , ಅಮ್ಮೇಂಬಳ ಚರ್ಚನ ಧರ್ಮಗುರು ಫಾ| ವಲೇರಿಯನ್ ಫ್ರೇಂಕ್ ಮತ್ತಿತರ ಪ್ರಮುಖ ಧರ್ಮಗುರುಗಳು ಮತ್ತು ಜನಪ್ರತಿನಿಧಿಗಳು ಊರಿನ ಪ್ರಮುಖರು ಭಾಗವಹಿಸಿಲಿದ್ದಾರೆ ಎಂದು ಜಲಾಲಿಯ್ಯ ಮಸ್ದಿದ್ ಚಟ್ಟೆಕ್ಕಲ್ ಸಜೀಪ ಇದರ ಅಧ್ಯಕ್ಷ ಅಬ್ದುರ್ರಮಾನ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts