ದ.ಕ. ಗ್ಯಾರೇಜು ಮಾಲೀಕರ ಸಂಘದ ಸ್ಥಾಪಕಾಧ್ಯಕ್ಷ ತಿಲಕ್ ರಾಜ್ ಅತ್ತಾವರ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಬಂಟ್ವಾಳದಲ್ಲಿರುವ ಗ್ಯಾರೇಜು ಮಾಲೀಕರ ಸಂಘದ ವತಿಯಿಂದ ಬಿ.ಸಿ.ರೋಡ್ ಗಾಣದಪಡ್ಪಿನಲ್ಲಿರುವ ಆಟೋಲೈನ್ಸ್ ಗ್ಯಾರೇಜಿನಲ್ಲಿ ನಡೆಸಲಾಯಿತು.
ಸಂಘದ ಅಧ್ಯಕ್ಷ ರಾಜೇಶ್ ಸಾಲ್ಯಾನ್, ಕಾರ್ಯದರ್ಶಿ ಜಗದೀಶ ರೈ ಉಪಸ್ಥಿತರಿದ್ದರು. ಗೌರವ ಸಲಹೆಗಾರರಾದ ಸುಧಾಕರ ಸಾಲ್ಯಾನ್, ತಿಲಕ್ ರಾಜ್ ಕುರಿತು ಗೌರವಪೂರ್ವಕ ಮಾತುಗಳನ್ನಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಉತ್ತಮ ಕಲಾವಿದರೂ ಆಗಿದ್ದ ತಿಲಕ್ ರಾಜ್, ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದುದನ್ನು ಅವರು ಸ್ಮರಿಸಿದರು.