ಪುಂಜಾಲಕಟ್ಟೆ

ಆರ್ ಪನ್ಲೆಕ ಪ್ರಥಮ, ನಸೀಬು ದ್ವಿತೀಯ, ತೂದು ಪಾತೆರ್ಲೆ ತೃತೀಯ

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಹಾಗೂ ಮಡಂತ್ಯಾರು ಜೆ.ಸಿ.ಐ. ಇದರ ಸಂಯುಕ್ತಾಶ್ರಯದಲ್ಲಿ  ದಿ| ಶಿಶಿರ್ ಕುಮಾರ್ ಪಿ.ಎಸ್. ಅವರ ಸ್ಮರಣಾರ್ಥ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ ಶಾರದ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ತಂಡ ಅಭಿನಯಿಸಿದ ಆರ್ ಪನ್ಲೆಕ ನಾಟಕ ಪ್ರಥಮ,ಶ್ರೀ ಗುರು ಕಲಾ ತಂಡ ಮುದರಂಗಡಿ ತಂಡದ ನಸೀಬು ನಾಟಕ ದ್ವಿತೀಯ,ತೆಲಿಕೆದ ತೆನಾಲಿ ಕಾರ್ಲ ಅವರ ತೂದು ಪಾತೆರ್‍ಲೆ ನಾಟಕ ತೃತೀಯ,ತೆಲಿಕೆದ ಕಲಾವಿದೆರ್ ಕೊಲ ಅವರ ಪೊರ್ಲು ತೂವೊಡ್ಚಿ ಚತುರ್ಥ ಪ್ರಶಸ್ತಿ ಪಡೆದಿದ್ದಾರೆ.

ಮಾ.5ರಂದು ರಾತ್ರಿ ನಡೆದ ಸಮಾರೋಪದಲ್ಲಿ ಪ್ರಶಸ್ತಿ ವಿತರಿಸಲಾಯಿತು.  ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಉಪನ್ಯಾಸಕ ಪ್ರೊ.ಜೋಸೆಫ್ ಎನ್.ಎಂ. ಅವರು  ಸಮಾರೋಪವನ್ನು ಉದ್ಘಾಟಿಸಿದರು.

ಬೆಳ್ತಂಗಡಿ ಬಿ.ಜೆ.ಪಿ. ಯುವ ಮೋರ್ಛಾ ಅಧ್ಯಕ್ಷ ಜೇಸಿ ಸಂಪತ್ ಬಿ.ಸುವರ್ಣ ಅವರು ಅಧ್ಯಕ್ಷತೆ ವಹಿಸಿದ್ದರು.  ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ ಅವರು ಬಹುಮಾನ ವಿತರಿಸಿದರು. ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್,ಜೇಸಿ ಆಲನ್ ರೋಹನ್ ವಾಜ್,ಲಾಲ ಗ್ರಾ.ಪಂ.ಪಿ.ಡಿ.ಒ.ಪ್ರಕಾಶ್ ಶೆಟ್ಟಿ ನೊಚ್ಚ,ಯುವ ವಾಹಿನಿ ಕೇಂದ್ರ ಸಮಿತಿ ನಿಕಟಪೂರ್ವಾಧ್ಯಕ್ಷ ಸಂತೋಷ್ ಕುಮಾರ್,ಹಿಂದೂ ಧರ್ಮೋತ್ಥಾನ ಸೇವಾ ಸಮಿತಿ ರಾಯಿ,ಕೊಯಿಲ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು,ಜೇಸಿ ಪ್ರಭಾಕರ ಶೆಟ್ಟಿ ಬೆಂಗಳೂರು, ಕೃಷ್ಣಪ್ಪ ಪೂಜಾರಿ ಪಾರೊಟ್ಟು,ರಾಜ್ ಟೈಲರ್,ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ ಪಿ.,ಕಾರ್ಯದರ್ಶಿ ಜಯರಾಜ ಅತ್ತಾಜೆ, ಜೆಸಿಐ ಅಧ್ಯಕ್ಷ ರಾಜೇಶ್ ಪಿ. ಅವರು ಉಪಸ್ಥಿತರಿದ್ದರು.

ಇದೇ ವೇಳೆ ಪಿಲಾತಬೆಟ್ಟು ಸೇ.ಸ.ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ,ವಾಲಿಬಾಲ್ ಆಟಗಾರ ದಿನೇಶ್ ಮೂಲ್ಯ ಅವರನ್ನು ಸಮ್ಮಾನಿಸಲಾಯಿತು. ತೀರ್ಪುಗಾರರಾದ ಡಿ.ಎಸ್.ಬೋಳೂರು,ರಾಮಚಂದ್ರ ರಾವ್,ರಮಾ ಬಿ.ಸಿ.ರೋಡ್ ಅವರನ್ನು ಸಮ್ಮಾನಿಸಲಾಯಿತು. ರಾಮಚಂದ್ರ ರಾವ್ ಅವರು ಅನಿಸಿಕೆ ವ್ಯಕ್ತಪಡಿಸಿದರು.

ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ.ಅವರು ಸ್ವಾಗತಿಸಿದರು. ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಪ್ರಸ್ತಾವಿಸಿದರು. ರಾಜೇಶ್ ಪಿ.ವಂದಿಸಿದರು.ಜೇಸಿ ಆರ್.ಕೆ.ಬಂಟ್ವಾಳ ಅವರು  ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ: ನಿರ್ದೇಶನ- ಪ್ರಥಮ: ಕೃಷ್ಣ ಜಿ.ಮಂಜೇಶ್ವರ (ಆರ್ ಪನ್ಲೆಕ,ಶಾರದ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ) ದ್ವಿತೀಯ: ರೋಹನ್ ಕುಮಾರ್ ಕುತ್ಯಾರ (ನಸೀಬು, ಶ್ರೀ ಗುರು ಕಲಾ ತಂಡ ಮುದರಂಗಡಿ). ಸಂಗೀತ- ಪ್ರ: ದಿನೇಶ್ ನಾಯಕ್ ಮಿತ್ತನಡ್ಕ (ಆರ್ ಪನ್ಲೆಕ,ಶಾರದ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ),ದ್ವಿ: ಪ್ರಸಾದ್ ಬಜಗೋಳಿ (ನಸೀಬು ) ರಂಗವಿನ್ಯಾಸ-ಪ್ರ: ಸದಾನಂದ ಆಚಾರ್ಯ(ಆರ್ ಪನ್ಲೆಕ,ಶಾರದ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ), ದ್ವಿ: ಶ್ರೀ ಗುರು ಕಲಾ ತಂಡ(ನಸೀಬು). ಪ್ರಸಾದನ-ಪ್ರ: ಪುರಂದರ ಎನ್.ಎಸ್.ನಾಗನವಳಚ್ಚಿಲ್ (ಆರ್ ಪನ್ಲೆಕ,ಶಾರದ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ),ದ್ವಿ: ಶ್ರೀ ಗುರು ಕಲಾ ತಂಡ(ನಸೀಬು). ಶ್ರೇಷ್ಟ ನಟ-ಪ್ರ: ಸೋಮನಾಥ ಶೆಟ್ಟಿ (ಚಂದು-ಆರ್ ಪನ್ಲೆಕ),ದ್ವಿ: ಚಂದ್ರಶೇಖರ ಸಿದ್ಧಕಟ್ಟೆ (ಲಂಬೋದರ-ತೂದು ಪಾತೆರ್‍ಲೆ). ಶ್ರೇಷ್ಟ ನಟಿ-ಪ್ರ: ರೂಪಶ್ರೀ ವರ್ಕಾಡಿ(ಅಕ್ಷತಾ- ಆರ್ ಪನ್ಲೆಕ),ದ್ವಿ: ಕು|ರಮ್ಯ ಎಲ್ಲೂರು(ನಂದಿನಿ -ನಸೀಬು). ಶ್ರೇಷ್ಠ ಹಾಸ್ಯ ನಟ-ಪ್ರ: ಜೆ.ಪಿ.ತೂಮಿನಾಡು(ವಸಂತ- ಆರ್ ಪನ್ಲೆಕ),ದ್ವಿ: ಸುನಿಲ್ ನೆಲ್ಲಿಗುಡ್ಡೆ (ಬಾಲಕೃಷ್ಣ -ತೂದು ಪಾತೆರ್‍ಲೆ). ಶ್ರೇಷ್ಠ ಹಾಸ್ಯ ನಟಿ-ಪ್ರ: ರವಿಚಂದ್ರ ರೈ ಕುಂಬ್ರ(ಸರಳ- ಆರ್ ಪನ್ಲೆಕ)ದ್ವಿ: ಕು|ಭವ್ಯ ಕುಂಪಲ(ಗೌರಿ-ಆಯಿನ ಆದ್ ಪೋಂಡು ). ಶ್ರೇಷ್ಠ ಪೋಷಕ ನಟ-ಪ್ರ: ಪ್ರಕಾಶ್ ಕೆ.ತೂಮಿನಾಡು (ಕೇಶವ- ಆರ್ ಪನ್ಲೆಕ),ದ್ವಿ: ಅಶ್ವಥ್ ಶೆಟ್ಟಿ ಬಗಂಬಿಲ(ನಾಗರಾಜ್- ಆರ್ ಪನ್ಲೆಕ). ಶ್ರೇಷ್ಠ ಪೋಷಕ ನಟಿ-ಪ್ರ: ರಾಜೇಶ್ ಮುಗುಳಿ ವರ್ಕಾಡಿ(ಮಲ್ಲಿಕಾ- ಆರ್ ಪನ್ಲೆಕ),ದ್ವಿ: ವಿಶ್ವನಾಥ ಜಿ.ರಾವ್ (ಲಕ್ಷ್ಮಿ-ಪೊರ್ಲು ತೂವೊಡ್ಚಿ). ತೀರ್ಪುಗಾರರ ವಿಶೇಷ ಬಹುಮಾನ: ಜಯಂತ ಅರಿಯಾಳ, ತಿಲಕ್‌ರಾಜ್,ಹರೀಶ್ ಉಳ್ಳೂರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ