ಬಂಟ್ವಾಳ

ಸಜೀಪನಡು ಗ್ರಾಮದಲ್ಲೊಂದು ವಿನೂತನ ರುದ್ರಭೂಮಿ ನಿರ್ಮಾಣ

ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವಿನ ಸಾರ್ವಜನಿಕ ರುದ್ರಭೂಮಿಯೀಗ ಪವಿತ್ರ ತಾಣವಾಗಿ ಮಾರ್ಪಾಡಾಗುತ್ತಿದೆ.
ಸುಮಾರು ೦.೮೫ ಎಕ್ರೆ ಸ್ಥಳದಲ್ಲಿ ನಿರ್ಮಿಸಲಾದ ಸಾರ್ವಜನಿಕ ಹಿಂದು ರುದ್ರಭೂಮಿಯಲ್ಲಿ ಮೂರ್ತಿಗಳ ರಚನಾ ಕಾರ್ಯ ನಡೆಯುತ್ತಿದೆ.


ರುದ್ರಭೂಮಿ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಮಾರ್ಗದರ್ಶನ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವದಾಸ ಅಡಪ ಇರಾ ಅವರ ನೇತೃತ್ವದಲ್ಲಿ ಕಾರ್ಯ ಸಾಗಿದೆ.
ಸಜೀಪನಡು ಮಾತ್ರವಲ್ಲದೆ ಅಕ್ಕಪಕ್ಕದ ಸಜೀಪಪಡು, ಸಜೀಪಮೂಡ, ಸಜೀಪಮುನ್ನೂರು, ಚೇಳೂರು, ಇರಾ, ಮಂಚಿ ಗ್ರಾಮಗಳಲ್ಲಿನ ಶವ ಸಂಸ್ಕಾರಕ್ಕೆ ಇಲ್ಲಿ ಅವಕಾಶವಿದೆ. ಈ ಗ್ರಾಮಗಳ ಗ್ರಾಮಸ್ಥರು ರುದ್ರಭೂಮಿಯ ಅಭಿವೃದ್ಧಿ ಸಮಿತಿಯಲ್ಲಿದ್ದಾರೆ.
೩೦ ಲಕ್ಷ ರೂ. ವೆಚ್ಚ


ರುದ್ರಭೂಮಿಯನ್ನು ಸುಮಾರು ೩೦ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಈಗಾಗಲೇ ಸುಮಾರು ೪೦ ಅಡಿ ಎತ್ತರದ ಶಿವನ ವಿಗ್ರಹ, ಸತ್ಯ ಹರಿಶ್ಚಂದ್ರನ ಪ್ರತಿಮೆ ನಿರ್ಮಾಣಗೊಂಡಿದೆ. ೩೦ ಅಡಿ ಎತ್ತರದ ತ್ರಿಶೂಲಸ್ತಂಭ, ಡಮರು ರಚನೆ ಕಾರ್ಯ ಪ್ರಗತಿಯಲ್ಲಿದೆ.
ಶ್ರೀ ಕ್ಷೇತ್ರ ಧಮ೯ಸ್ಥಳ ವತಿಯಿಂದ ಒದಗಿಸಲಾದ ದಹನ ಚೇಂಬರ್ ಈಗ ಲಭ್ಯ. ಇನ್ನೊಂದು ದಹನ ಚೇಂಬರ್ ,ಪ್ರವೇಶದ್ವಾರ, ಶವಸಂಸ್ಕಾರದ ಮುನ್ನ ಅಂತಿಮ ದಶ೯ನಕ್ಕಾಗಿ ಮೃತದೇಹವನ್ನಿರಿಸಲು ಶವ ಹಾಗೂ ಸತ್ಯಹರೀಶ್ಚಂದ್ರ ಪ್ರತಿಮೆ ಯ ಸಮ್ಮುಖದಲ್ಲಿ ಕಟ್ಟೆಯೊಂದನ್ನು ನಿಮಿ೯ಸಲಾಗುವುದು ಎಂದು ಅಧ್ಯಕ್ಷ ಯಶವಂತ ಡಿ ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ರುದ್ರಭೂಮಿಯ ಸುತ್ತಲೂ ವಿವಿಧ ಜಾತಿಯ ಸಸಿಗಳು, ತೆಂಗಿನ ಗಡವನ್ನು ನೆಟ್ಟು ಪಾಲನೆ ಮಾಡಲಾಗುತ್ತಿದೆ. ರುದ್ರಭೂಮಿಯ ಭದ್ರತೆಯ ದೃಷ್ಠಿಯಿಂದ ಅವರಣ ಗೋಡೆ, ತಡೆಗೋಡೆಯನ್ನು ನಿಮಿ೯ಸಲಾಗುವುದಲ್ಲದೆ, ಸುತ್ತಲೂ ಇಂಟರ್ ಲಾಕ್ ಅಳವಡಿಸಲಾಗುವುದು. ವಿಶೇಷವಾಗಿ ಈ ರುದ್ರಭೂಮಿಗೆ ಶವ ಸಾಗಿಸುವುದಕ್ಕಾಗಿ ಅಂಬುಲೆನ್ಸ್ ಸೇವೆಯನ್ನು ಉಚಿತವಾಗಿ ನೇತಾಜಿ ಯುವಕ ಸಂಘದಿಂದ ಕಲ್ಪಿಸಲಾಗಿದೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ