ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಶವ ಬಂಟ್ವಾಳ ಬೈಪಾಸ್ ಸನಿಹದ ಜಾಗೆಯೊಂದರಲ್ಲಿ ಸೋಮವಾರ ನಸುಕಿನ ಜಾವ ದೊರಕಿದೆ. ಕಟ್ಟಡವೊಂದರಲ್ಲಿ ಮಲಗಿದ್ದ ಈತ, ಮೂತ್ರಶಂಕೆಗೆಂದು ಕೆಳಕ್ಕೆ ಇಳಿಯುತ್ತಿದ್ದಾಗ, ಆಯತಪ್ಪಿ ಬಿದ್ದು, ಕುತ್ತಿಗೆ ತುಂಡಾಗಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
www.bantwalnews.com report
ಸೋಮವಾರ ನಸುಕಿನ ಜಾವ ಬಂಟ್ವಾಳ ಬೈಪಾಸ್ ಬಳಿ ಘಟನೆ ನಡೆದಿದ್ದು, ಹೊಳಲ್ಕೆರೆ ನಿವಾಸಿ ವಸಂತ (35) ಎಂದು ಗುರುತಿಸಲಾಗಿದೆ.
ಈತ ಬೈಪಾಸಿನಲ್ಲಿರುವ ಮಟನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕಂಠಪೂರ್ತಿ ಕುಡಿತು ಮಲಗಿದ ಈತ, ನಸುಕಿನ ಜಾವ ಮೂತ್ರಶಂಕೆಗೆಂದು ಎದ್ದು, ಕಟ್ಟಡದಿಂದ ಇಳಿಯುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾನೆ. ಪರಿಣಾಮ, ಕುತ್ತಿಗೆ ತುಂಡಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಬೆಳಗ್ಗೆ ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸುದ್ದಿ ತಿಳಿದ ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್, ನಗರ ಠಾಣೆಯ ಪ್ರಭಾರ ಎಸ್.ಐ. ರಕ್ಷಿತ್ ಪ್ರೊಬೆಷನರಿ ಐಪಿಎಸ್ ಅಧಿಕಾರಿ ನಾಗೇಶ್ ಡಿ.ಎಲ್, ಫೊರೆನ್ಸಿಕ್ ಅಧಿಕಾರಿ ಮಹಾಬಲ ಶೆಟ್ಟಿ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಸಾಗಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)