ಪುಂಜಾಲಕಟ್ಟೆ

ಪುಂಜಾಲಕಟ್ಟೆಯಲ್ಲಿ ಸಾಮೂಹಿಕ ವಿವಾಹ, ಸನ್ಮಾನ

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಪುಂಜಾಲಕಟ್ಟೆ ಹಾಗೂ ಜೆ.ಸಿ.ಐ.ಮಡಂತ್ಯಾರು ಆಶ್ರಯದಲ್ಲಿ ೩೩ನೇ ವರ್ಷದ ಸಂಭ್ರಮ ಆಚರಣೆ ಪ್ರಯುಕ್ತ ೯ನೇ ವರ್ಷದ ಸಾಮೂಹಿಕ ವಿವಾಹ ಸಮಾರಂ ಬಂಟ್ವಾಳ ತಾಲೂಕು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು.ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯದ ವಠಾರದಿಂದ ವಧು-ವರರನ್ನು ವೈಭವಪೂರ್ಣ ಮೆರವಣಿಯಲ್ಲಿ ವಿವಾಹ ಮಂಟಪಕ್ಕೆ ಕರೆತರಲಾಯಿತು.


ಗೊಂಬೆ ಕುಣಿತ,ವಿವಿಧ ವಾದ್ಯ ಗೋಷ್ಠಿ, ವಿದ್ಯಾರ್ಥಿಗಳ ಚೆಂಡೆ ವಾದನ ಮೆರವಣಿಗೆ ವಿಶೇಷ ಮೆರುಗು ನೀಡಿತು.ವೇದಮೂರ್ತಿ ಶ್ರೀ ಕೃಷ್ಣ ಭಟ್ ಗುರುವಾಯನಕೆರೆ ಮತ್ತು ಆರ್ಚಕ ವೃಂದದ ಮಂತ್ರ ಘೋಷಗಳೊಂದಿಗೆ ನೆರೆದ ಬಂಧು-ಭಗಿನಿಯರ ಶುರ್ಭಾಶೀರ್ವಾದದೊಂದಿಗೆ 13 ಜೋಡಿ ವಧು-ವರರು ಹಸೆಮಣೆಯನ್ನೇರಿ ಗೃಹಸ್ಥಾಶ್ರಮದ ದೀಕ್ಷೆಯನ್ನು ಪಡೆದರು.

ಚಲನಚಿತ್ರ ನಟ, ಪಡುಮಲೆ ಕುತ್ಯಾಲ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ವಿನೋದ್ ಆಳ್ವ ವಿವಾಹ ಸಮಾರಂಭ ಉದ್ಘಾಟಿಸಿದರು.
ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ|ಗಣೇಶ್ ಕಾರ್ಣಿಕ್,ಮಾಜಿ ಸಚಿವ ನಾಗರಾಜ್ ಶೆಟ್ಟಿ, ಶ್ರೀ.ಕ್ಷೆ.ಧ. ಗ್ರಾ.ಯೋಜನೆ ಉಡುಪಿ ಮತ್ತು ಮಂಗಳೂರು ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಸ್ವರ್ಣಲತಾ, ವಸಂತ ಹೆಗ್ಡೆ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರ, ಬೆಳ್ತಂಗಡಿ ಬಿ.ಜೆ.ಪಿ ಅಧ್ಯಕ್ಷ ರಂಜನ್ ಗೌಡ,ಉದ್ಯಮಿ ಜಿತೇಂದ್ರ ಎಸ್.ಕೊಟ್ಟಾರಿ,ಬಿಲ್ಲವ ಮಹಾಮಂಡಲ ವಕ್ತಾರ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ತಾ.ಪಂ. ಸದಸ್ಯ ರಮೇಶ್ ಕುಡುಮೇರು,ಡಾ.ಬಾಲಕೃಷ್ಣ ಶೆಟ್ಟಿ ಸುಂದರ ರಾಜ್ ಹೆಗ್ಡೆ,ರಶ್ಮಿ, ಹುಕುಂ ರಾಂ ಪಠೇಲ್, ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು,ಪುಂಜಾಲಕಟ್ಟೆ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಕುಮಾರ್,ಉದ್ಯಮಿ ಹರೀಶ್ ಪೈ, ಸುಬ್ಬಣ್ಣ, ಚೆನ್ನಕೇಶವ, ದ.ಕ ಜಿಲ್ಲಾ ಪಂ. ಸದಸ್ಯ ಹಾಗೂ ಕ್ಲಬ್ ಸ್ಥಾಪನಾಧ್ಯಕ್ಷ ಯಂ.ತುಂಗಪ್ಪ ಬಂಗೇರ,ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಮಡಂತ್ಯಾರು ಜೆ.ಸಿ.ಐ. ಅಧ್ಯಕ್ಷ ರಾಜೇಶ್ ಪಿ.ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ.,ಕಾರ್ಯದರ್ಶಿ ಜಯರಾಜ್ ಅತ್ತಾಜೆ ಮತ್ತಿತರರು ಶುಭ ಹಾರೈಸಿದರು. ಪಿ.ಎನ್ ಪ್ರಭಾಕರ ಸ್ವಾಗತಿಸಿದರು.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಇದೇ ಸಂದರ್ಭ ಸಭಾ ಕಾರ್ಯಕ್ರಮದಲ್ಲಿ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ : ಡಾ|ರಾಜಶೇಖರ್ ಕೋಟ್ಯಾನ್-(ಚಲನಚಿತ್ರ ರಂಗ),ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು-(ಯಕ್ಷಗಾನ ಕ್ಷೇತ್ರ), ವಿನಾಯಕ ರಾವ್-(ಸಮಾಜ ಸೇವೆ ), ರಮೇಶ್ ಬಾಯಾರು-(ಶಿಕ್ಷಣ ಕ್ಷೇತ್ರ),ರಮೇಶ್ ಕಲ್ಲಡ್ಕ-(ಕಲಾ ಕ್ಷೇತ್ರ)

ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ : ಕಿಶೋರ್ ಪೆರಾಜೆ-(ಪತ್ರಿಕೋದ್ಯಮ),ಸಂಜೀವ ಶೆಟ್ಟಿ ಮುಗೆರೋಡಿ-(ಕ್ರೀಡಾ ಕ್ಷೇತ್ರ),ಶೇಖರ ನಾರಾವಿ-(ಸಮಾಜಸೇವೆ),ಕೆ.ಧರ್ಮಪಾಲ-(ಸರಕಾರಿ ಸೇವೆ),ಕು|ಶೃತಿ ದಾಸ್-(ಬಹುಮುಖ ಪ್ರತಿಭೆ), ಕು|ಶಕಿತಾ (ಬಹುಮುಖ ಪ್ರತಿಭೆ)
ಅತ್ಯುತ್ತಮ ಯುವ ಸಂಘಟನೆ ಸಮಾಜ ಸೇವೆಗಾಗಿ ಶ್ರೀ ಶಾರದಾಂಭ ಭಜನಾ ಮಂಡಳಿ ಕುಕ್ಕೇಡಿ ಬುಳೆಕ್ಕರ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ