ಪರಿಸರದಲ್ಲಿ ಮೂರನೇ ಬಾರಿ ನಡೆಯುತ್ತಿರುವ ಕೃತ್ಯ
www.bantwalnews.com report
ತೊಕ್ಕೊಟ್ಟಿನಲ್ಲಿರುವ ಕರ್ಣಾಟಕ ಬ್ಯಾಂಕ್ ಕಚೇರಿಗೆ ಮಂಗಳವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಅಮೂಲ್ಯ ಕಡತಗಳು ಬೆಂಕಿಗಾಹುತಿಯಾಗಿರುವ ಶಂಕೆ ಇದೆ. ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿ, ಬೆಂಕಿ ನಂದಿಸಲಾಯಿತು. ವಾರದ ಹಿಂದೆಯಷ್ಟೇ ಸಮೀಪದ ಸಿಪಿಎಂ ಕಚೇರಿಗೆ ಕಿಚ್ಚಿಡಲಾಗಿತ್ತು.
ಘಟನೆ ವಿವರ:
ಮಂಗಳವಾರ ರಾತ್ರಿ ಸುಮಾರು 10.30ರ ವೇಳೆ ಈ ಘಟನೆ ನಡದಿದೆ. ಬೆಂಕಿ ಉರಿಯುತ್ತಿರುವುದನ್ನು ಕಂಡು ಸ್ಥಳೀಯರು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ವಿಷಯ ತಿಳಿದು ಸ್ಥಳಕ್ಕೆಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಕಿಡಿಗೇಡಿಗಳು ಬ್ಯಾಂಕಿನ ಕಿಟಕಿ ಬಾಗಿಲು ತೆರೆದು ಒಳಗಡೆ ಬೆಂಕಿ ಹಾಕಿದ್ದು ಅನೇಕ ಅಮೂಲ್ಯ ಕಡತಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ.
ಒಂದು ವಾರದ ಅವಧಿಯಲ್ಲಿ ತೊಕ್ಕೊಟ್ಟು ಪರಿಸರದ ಮೂರು ಕಡೆ ಈ ರೀತಿ ಬೆಂಕಿ ಹಚ್ಚಿದ ಪ್ರಕರಣ ನಡೆದಿವೆ.
ಸಿಪಿಎಂ ಕಚೇರಿ, ತೊಕ್ಕೊಟ್ಟಿನ ಗೂಡಂಗಡಿಗಳಗೆ ಕಿಚ್ಚಿಡಲಾಗಿತ್ತು. ಸಿಪಿಎಂ ಕಚೇರಿಗೆ ಬೆಂಕಿಇಟ್ಟ ಕೃತ್ಯ ರಾಜಕೀಯ ಭಾಷಣಗಳಿಗೆ ಕಾರಣವಾಗಿತ್ತು. ಆದರೆ ಇದೀಗ ಯಾವುದೋ ಕಿಡಿಗೇಡಿಗಳು ಈ ಕೃತ್ಯ ನಡೆಸುತ್ತಿರುವುದಾಗಿ ಶಂಕೆ ಮೂಡಿದ್ದು ಪೊಲೀಸರು ಪ್ರಬಲ ಕಾರ್ಯಾಚರಣೆ ನಡೆಸಿದರೆ ದುಷ್ಕೃತ್ಯ ಎಸಗಿದವರನ್ನು ಮಟ್ಟ ಹಾಕಲು ಸಾಧ್ಯ ಎನ್ನಲಾಗಿದೆ.