ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ವಿಶ್ವದ ಅಗ್ರಗಣ್ಯ ಪಂಡಿತ ಸಂಘಟನೆಯಾಗಿದ್ದು, ಇದರ ಮಹಾನ್ ನಾಯಕರು ಯಾವುದೇ ಲೌಕಿಕ ಆಡಂಬರಗಳಿಗೆ ಒತ್ತು ನೀಡಿದವರಲ್ಲ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.
ಪಾಣೆಮಂಗಳೂರು ಸಮೀಪದ ನೆಹರುನಗರ ನೂರುಲ್ ಹುದಾ ಯಂಗ್‌ಮೆನ್ಸ್ ಎಸೋಸಿಯೇಶನ್ ದಶಮಾನೋತ್ಸವದ ಪ್ರಯುಕ್ತ ನೆಹರುನಗರ ಶಾಲಾ ಮೈದಾನದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಏಕದಿನ ಮತ ಪ್ರಭಾಷಣ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಸಮಸ್ತದ ನಾಯಕರು ಯಾವುದೇ ಒಂದು ತೀರ್ಮಾನ ಕೈಗೊಂಡರೆ ಅದನ್ನು ತಿರುಚಿದ ಅಥವಾ ತಿದ್ದುಪಡಿ ಯಾವುದೇ ಉದಾರಣೆಗಳು ಇದುವರೆಗೂ ನಡೆದಿಲ್ಲ. ಅವರ ಪ್ರತಿಯೊಂದು ತೀರ್ಮಾನಗಳು ದೂರದೃಷ್ಟಿತ್ವನ್ನು ಪಡೆದುಕೊಂಡಿರುತ್ತದೆ ಎಂದರು.
ಸಯ್ಯಿದ್ ಶಮೀರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುವಾಶಿರ್ವಚನಗೈದರು. ನೆಹರುನಗರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎಸ್. ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಅಂತರಾಷ್ಟ್ರೀಯ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಅಲ್-ಖಾಸಿಮಿ ಪತ್ತನಾಪುರಂ ’ಪ್ರಿಯಪೆಟ್ಟ ಉಮ್ಮ’ ಎಂಬ ವಿಷಯದಲ್ಲಿ ಮುಖ್ಯ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾದ ಹಾಜಿ ಕೆ.ಎಸ್. ಇಸ್ಮಾಯಿಲ್ ಕಲ್ಲಡ್ಕ, ಅಬೂಬಕ್ಕರ್ ಹಾಜಿ ಗೋಳ್ತಮಜಲು, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ ಆಲಡ್ಕ, ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ನೆಹರುನಗರ ಬದ್ರಿಯಾ ಮದ್ರಸ ಅಧ್ಯಾಪಕ ಸಿದ್ದೀಕ್ ಫೈಝಿ, ನೆಹರುನಗರ ಬದ್ರಿಯಾ ಮಸೀದಿ ಪದಾಧಿಕಾರಿಗಳಾದ ಪಿ.ಎಂ. ಇಬ್ರಾಹಿಂ ನೆಹರುನಗರ, ಹಾಜಿ ಹಸನಬ್ಬ ನೆಹರುನಗರ, ಅಬ್ದುಲ್ ಸಲೀಂ ನೆಹರುನಗರ, ನರಿಕೊಂಬು ಗ್ರಾ.ಪಂ. ಸದಸ್ಯ ಸುಲೈಮಾನ್, ನೆಹರುನಗರ ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಪಿ.ಎಸ್. ಅಬ್ದುಲ್ ರಝಾಕ್, ಕಾರ್ಯದರ್ಶಿ ಅಬ್ಬಾಸ್ ಕಾರಾಜೆ, ಕೋಶಾಧಿಕಾರಿ ಪಿ.ಜೆ. ಮುಹಮ್ಮದ್, ಉದ್ಯಮಿ ಅಬ್ದುಲ್ ಹಮೀದ್ ಸೌದಿಅರೇಬಿಯಾ, ಪ್ರಮುಖರಾದ ಹಾಜಿ ಸಿ.ಪಿ. ಇಬ್ರಾಹಿಂ, ಮಾಹಿನ್ ದಾರಿಮಿ ಪಾತೂರು, ಬಿ.ಎಂ. ಹನೀಫ್ ಮುಸ್ಲಿಯಾರ್ ಬೋಳಂತೂರು, ಹಾತಿಂ ಅಹ್ಮದ್ ಅಡ್ವಕೇಟ್, ಬಿ.ಎ ಖಾದರ್ ಮಾಸ್ಟರ್ ಬಂಟ್ವಾಳ, ಸುಲ್ಫಿಕರ್ ಅಲಿ ಚಾಂಗನಚೇರಿ-ಕೇರಳ ಮೊದಲಾದವರು ಭಾಗವಹಿಸಿದ್ದರು.
ನೂರುಲ್ ಹುದಾ ಯಂಗ್‌ಮೆನ್ಸ್ ಗೌರವಾಧ್ಯಕ್ಷ ಅಬ್ದುಲ್ ಅಝೀಝ್, ಅಧ್ಯಕ್ಷ ಅಬ್ದುಲ್ ಕರೀಂ ಪಿ.ಎಂ., ಪದಾಧಿಕಾರಿಗಳಾದ ಹಬೀಬ್, ನೌಫಲ್, ಇಮ್ರಾನ್, ರಿಯಾಝ್ ಎಸ್.ಕೆ. ಶಾಂತಿಅಂಗಡಿ, ಹನೀಫ್ ಸಿ.ಪಿ., ಇಮ್ರಾನ್ ಕೆ.ಎಸ್. ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಅಲ್-ಖಾಸಿಮಿ ಹಾಗೂ ನೆಹರುನಗರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎಸ್. ಅಬ್ದುಲ್ ಹಮೀದ್ ಅವರನ್ನು ಗೌರವಿಸಲಾಯಿತು.
ಬದ್ರಿಯಾ ಮಸೀದಿ ಖತೀಬ್ ಕೆ.ಎಂ. ಅಬ್ದುಲ್ ಶುಕೂರ್ ದಾರಿಮಿ ಸ್ವಾಗತಿಸಿ, ಮದ್ರಸ ಮುಖ್ಯೋಪಾಧ್ಯಾಯ ಫಕ್ರುದ್ದೀನ್ ದಾರಿಮಿ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.