ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಫೆ.26 ಮತ್ತು 27ರ ಪ್ರವಾಸ ಕಾರ್ಯಕ್ರಮಗಳು ಇಂತಿವೆ.
ಫೆ.26ರಂದು ಬೆಳಿಗ್ಗೆ:9 – ಬಂಟ್ವಾಳ ಎಸ್.ವಿ.ಎಸ್ ದೇವಳ ಪ್ರೌಢಶಾಲಾ ಮೈದಾನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ, 11 – ಹಿದಾಯತ್ತುಲ್ ಇಸ್ಲಾಂ ಜುಮಾ ಮಸೀದಿ ಮತ್ತು ಮದರಸ ಶಂಸುಲ್ ಉಲಾಮಾ ನಗರ ಕಲ್ಲಗುಡ್ಡೆ ಅರಳ ಇದರ ನೂತನ ಕಟ್ಟಡ ಉದ್ಘಾಟನೆ, ಮಧ್ಯಾಹ್ನ:12- ಪುತ್ತೂರು ಎಂ.ಸುಂದರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಯುವ ಬಂಟರ ದಿನಾಚರಣೆಯ ಅಂಗವಾಗಿ ಸತ್ಯನಾರಾಯಣ ಪೂಜೆ, ಯುವ ಬಂಟರ ಪ್ರತಿಭಾನೇಶ್ವಣೆ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ, ಸಂಜೆ:4 – ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಕುಲಾರ ಸಂಘ (ರಿ) ಕುಳಾಯಿ ಇದರ 30ನೇ ವಾರ್ಷಿಕೋತ್ಸವ ಅಂಗವಾಗಿ ಕುಲಾಲ ಸಂಭ್ರಮದ ಸಭಾ ಕಾರ್ಯಕ್ರಮ, 5 – ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ಅಭಿನಂದನಾ ಸಮಾರಂಭ ಹಾಗೂ ಸನ್ಮಾನ ಸಮಾರಂಭ, ರಾತ್ರಿ:7.30 – ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಡ್ಯಾರು ಮಂಗಳೂರು ಇದರ ವಾರ್ಷಿಕ ಜಾತ್ರೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ
ಫೆ.27ರಂದು : ಬೆಳಿಗ್ಗೆ 10.30 – ಬಿ.ಸಿ.ರೋಡ್ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾ ಭವನದಲ್ಲಿ ಪಶುಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣೆ, ಮಧ್ಯಾಹ್ನ:3 – ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಗರೋತ್ಥಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಸಂಜೆ:4.30 – ಮಂಗಳೂರು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಆಡಳಿತ ಕಛೇರಿಯಲ್ಲಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಚಿವರು ಭಾಗವಹಿಸುವರು.