ಫರಂಗಿಪೇಟೆಯಲ್ಲಿರುವ “ನಮ್ಮ ಆಯುರ್ವೇದ ಚಿಕಿತ್ಸಾಲಯ ಮತ್ತು ಔಷಧಾಲಯ’ದಲ್ಲಿ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಉಚಿತ ಶಿಬಿರ ಭಾನುವಾರ ನಡೆಯಿತು.
ಪರಿಸರದ ಹಲವಾರು ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದರು. ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆತಿಕಾ ಶಿಬಿರವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ದುರ್ಗೇಶ ಶೆಟ್ಟಿ, ವೈದ್ಯರಾದ ಡಾ. ಮಹೇಶ್ ಟಿ.ಎಸ್, ಡಾ.ಶ್ರೀವಿದ್ಯಾ ಈ ಸಂದರ್ಭ ಉಪಸ್ಥಿತರಿದ್ದರು. ಪತ್ರಕರ್ತ ಹರೀಶ ಮಾಂಬಾಡಿ ಕಾರ್ಯಕ್ರಮ ನಿರೂಪಿಸಿದರು. ಕ್ಯಾಲ್ಸಿಯಂ ಅಗತ್ಯ ಮತ್ತು ಮೂಳೆ ಸವೆತವನ್ನು ಪತ್ತೆ ಹಚ್ಚುವ ಈ ಶಿಬಿರವನ್ನು ಝಂಡು ಫಾರ್ಮಾಸ್ಯುಟಿಕಲ್ಸ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…