ಮಂಗಳೂರು ಕೇಂದ್ರ ಮೈದಾನದಲ್ಲಿ 26ರಂದು ಬೆಳಗ್ಗೆ 10ರಿಂದ ಸಂಜೆ 4ವರೆಗೆ ಗೋ ಸತ್ಯಾಗ್ರಹ ನಡೆಯುತ್ತದೆ. ರಾಜ್ಯಾದ್ಯಂತ ಸಂತರ ನೇತೃತ್ವದಲ್ಲಿ ಸಾರ್ವಜನಿಕರಿಂದ ಈ ಸತ್ಯಾಗ್ರಹ ನಡೆಯುವುದು.
ಸಂಘಟಕರು ಇವರು: ವಿಶ್ವ ಹಿಂದು ಪರಿಷತ್ತು, ಬಜರಂಗ ದಳ, ಹಿಂದು ಜಾಗರಣಾ ವೇದಿಕೆ, ಗೋಪರಿವಾರ, ಜಿಲ್ಲಾ ಗೋಆಂದೋಲನ ಸಮಿತಿ ಮತ್ತು ವಿವಿಧ ಸಂಘಟನೆಗಳು. ಕರ್ನಾಟಕ ರಾಜ್ಯ ಗೋಶಾಲೆಗಳ ಒಕ್ಕೂಟ.
ಏನು ಬೇಡಿಕೆ (ಇದು ಕೇಂದ್ರಕ್ಕೆ)
ಗೋಹತ್ಯೆ ನಿಷೇಧಿಸಬೇಕು. , ಗೋಹಂತಕರಿಗೆ ಏಳು ವರ್ಷ ಶಿಕ್ಷೆಯಾಗಬೇಕು, 1 ಲಕ್ಷ ದಂಡ ವಿಧಿಸಬೇಕು. ಗೋಹಿಂಸೆ ಮಾಡಿದವರಿಗೆ 5 ವರ್ಷ ಶಿಕ್ಷೆ, ಪ್ರತಿ ಗೋವಿಗೆ 50 ಸಾವಿರ ರೂ ದಂಡ, ಸಾಗಾಟ ವಾಹನ ಮುಟ್ಟುಗೋಲು
ಇದು ರಾಜ್ಯಕ್ಕೆ
ರಾಜ್ಯದಲ್ಲಿ ಗೋಮಾಳ ಭೂಮಿ ಸರ್ವೆ ಮಾಡಿಸಿ ಗಡಿಕಲ್ಲು ಹಾಕಿ ಬೇಲಿ ಹಾಕಬೇಕು. ಅದರಲ್ಲಿ ಹಸಿ ಹುಲ್ಲು ಬೆಳೆಸಿ, ಸ್ಥಳೀಯ ಗೋವುಗಳಿಗೆ ಕಡಿಮೆ ದರದಲ್ಲಿ ಕೊಡಬೇಕು.
ಇದು ಕಾಂಗ್ರೆಸ್, ಬಿಜೆಪಿ ಸಹಿತ ಎಲ್ಲ ರಾಜಕೀಯ ಪಕ್ಷಗಳಿಗೆ ಸಂಘಟಕರ ಬೇಡಿಕೆ. ಇದನ್ನು ಮುಂದಿಟ್ಟು ರಾಜ್ಯಾದ್ಯಂತ ಸಂತರ ನೇತೃತ್ವದಲ್ಲಿ ಸಾರ್ವಜನಿಕರಿಂದ ಗೋ ಸತ್ಯಾಗ್ರಹ ನಡೆಯುತ್ತದೆ ಎಂದು ಪ್ರಕಟಣೆ ಹೇಳಿದೆ.