ಸಮಾಜದಲ್ಲಿ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ಅಗತ್ಯ. ಇದರಿಂದ ಎಲ್ಲರ ಜೊತೆ ಗುರುತಿಸಿಕೊಂಡು ಸೇವೆ ಸಲ್ಲಿಸಲು ಅವಕಾಶ ಆಗುವುದು. ಹಿಂದುಳಿದ ಸಮಾಜದವರು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಮುಚೂಣಿಗೆ ಬರಲು ಪ್ರಯತ್ನ ನಡೆಸಿದಾಗ ಒಬ್ಬರಲ್ಲ ಒಬ್ಬರು ಮುಂದಕ್ಕೆ ಬರಲು ಸಾಧ್ಯವಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಫೆ. ೨೪ರಂದು ಚೆಂಡ್ತಿಮಾರ್ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಹಾಗೂ ಆದಿದ್ರಾಡ ಸುಧಾರಕ ಸಂಘ ಆಶ್ರಯದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಬಂಟ್ವಾಳ ಎಸ್‌ವಿಎಸ್ ಕಾಲೇಜು ಪ್ರೊ| ತುಕರಾಂ ಪೂಜಾರಿ ಮಾತನಾಡಿ ಆಧುನಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಹೆತ್ತವರನ್ನು ಮನೆಯಲ್ಲಿ ಉಳಿಸಿಕೊಂಡು ಪೋಷಿಸುವ ಮಕ್ಕಳ ಮನೋಸ್ಥಿತಿ ಕುಸಿತ ಆಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಅಧ್ಯಕ್ಷ ಕೆ.ಕೃಷ್ಣಕುಮಾರ್ ಪೂಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಜೀಪಮೂಡ ಗ್ರಾ.ಪಂ.ಸದಸ್ಯ ರಮೇಶ್ ಪಣೋಲಿಬೈಲು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ ಪುರಸಭಾ ಸದಸ್ಯ ಪ್ರವೀಣ್ ಜಕ್ರಿಬೆಟ್ಟು, ಮುತ್ತೂರು ಶ್ರೀ ಸತ್ಯಪದ್ನಾಜಿ ಸಾರ ಮುಪ್ಪಣ್ಣ ದೈವಸ್ಥಾನದ ಆಡಳಿತ ಮೊಕ್ತೇಸರ ಹರಿಯಪ್ಪ , ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಽಕಾರಿ ಶೀನ ಮೂಡಬಿದಿರೆ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಜನಾರ್ದನ ಚಂಡ್ತಿಮಾರ್ ಪ್ರಸ್ತಾವನೆ ನೀಡಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ವಿವರಿಸಿದರು. ಸಂಜೀವ ಚಂಡ್ತಿಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶೀನ ಚಂಡ್ತಿಮಾರ್ ವಂದಿಸಿದರು.