ಫರಂಗಿಪೇಟೆಯ ಮೊಹಿದ್ದೀನ್ ಜುಮಾ ಮಸೀದಿ ಇದರ ಸಹಕಾರದೊಂದಿಗೆ ಖಿದ್‌ಮತುಲ್ ಇಸ್ಲಂ ಎಸೀಸಿಯೇಷನ್ ಫರಂಗಿಪೇಟೆ ವತಿಯಿಂದ10 ಜೋಡಿ ಸರಳ ಸಾಮೂಹಿಕ ವಿವಾಹ ಕಾಐಕ್ರಮ ಫೆ. 26 ರಂದು ಭಾನುವಾರ ಫರಂಗಿಪೇಟೆಯ ನದೀ ಕಿನಾರೆಯ ಮೈದಾನದಲ್ಲಿ ನಡೆಯಲಿದೆ.
ಮಂಗಳೂರು ಖಾಝಿ ಅಲ್‌ಹಾಜ್ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿ ಉದ್ಘಾಟಿಸುವರು. ಫರಂಗಿಪೇಟೆ ಮುಹಿಯ್ಯಿದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಎಫ್. ಮಹಮ್ಮದ್ ಬಾವ ಅಧ್ಯಕ್ಷತೆ ವಹಿಸುವರು. ಸಮಸ್ತ ಕೆಂದ್ರ ಮುಶಾವರ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ , ಕಣ್ಣೂರಿನ ಮುದರ್ರಿಸ್ ಸೈತ್ತದ್ ಮಹಮ್ಮದ್ ಜಿಫ್ರಿ ಮತ್ತು ಕೋಯಾ ತಂಙಳ್, ಫರಂಗಿಪೇಟೆ ಜುಮ್ಮಾ ಮಸೀದಿಯ ಮುದರ್ರಿಸ್ ಉಸ್ಮಾನ್ ದಾರೀಮಿ, ಮಾಹಿನ್ ದಾರಿಮಿ ಪಾತೂರು ಉಪಸ್ಥಿತರಿರುವರು.
ಬಿ.ಎ. ಗ್ರೂಫ್ ಆಫ್ ಕಂಪೆನಿಯ ಬಿ. ಅಹ್ಮದ್ ಹಾಜಿ ಮುಹಿಯ್ಯುದ್ದೀನ್ , ಸಮಸ್ತ ಕೇಂದ್ರ ಮುಶಾವರದ ಉಪಾದ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಆಹಾರ ಸಚಿವ ಯು.ಟಿ.ಖಾದರ್, ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಅಧ್ಯಕ್ಷ ಮೊದಿನ್ ತುಂಬೆ, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷ ಎಮ್.ಎ. ಗಫೂರ್, ಮನಪಾ ಆಯುಕ್ತ ಮಹಮ್ಮದ್ ನಝೀರ್ ಮತ್ತಿತರ ಗಣ್ಯರ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)