ಬಂಟ್ವಾಳ

ಕೊಳಕೆ: ಮಾರ್ಚ್ 4ಕ್ಕೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಎಸ್‌.ಎಂ.ಎಸ್ ಸ್ಪೋರ್ಟ್ಸ್ ಕ್ಲಬ್ ಕೊಳಕೆ ಇದರ ಆಶ್ರಯದಲ್ಲಿ 7ನೇ ವರ್ಷದ ಪ್ರಯುಕ್ತ ಪ್ರಥಮ‌ ಬಾರಿಗೆ 8 ಜನರ 40 ಗಜಗಳ ಹೊನಲು ಬೆಳಕಿನ ಸೂಪರ್ ಫೋರ್ ಕ್ರಿಕೆಟ್ ಪಂದ್ಯಾಟ ಮಾರ್ಚ್ 4 ರಂದು ಸಂಜೆ 6 ಗಂಟೆಗೆ ಸಜಿಪಮೂಡ ಗ್ರಾಮದ ಕೊಳಕೆಯಲ್ಲಿ ನಡೆಯಲಿದೆ.
ಪ್ರಥಮ ಬಹುಮಾನ ರೂ. 20,002/- ಹಾಗೂ ಎಸ್.ಎಂ.ಎಸ್. ಟ್ರೋಫಿ, ದ್ವಿತೀಯ ರೂ. 10,001/- ಹಾಗೂ ಎಸ್.ಎಂ‌.ಎಸ್. ಟ್ರೋಫಿ, ತೃತೀಯ ಹಾಗೂ ಚತುರ್ತ ಎಸ್.ಎಂ.ಎಸ್. ಟ್ರೋಫಿ ಮತ್ತು ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರವೇಶ ಶುಲ್ಕ ರೂ. 2000/- ಆಗಿರುತ್ತದೆ. ದಿನಾಂಕ 01-03-2017 ರ ಮುಂಚಿತವಾಗಿ ತಂಡಗಳ ಹೆಸರನ್ನು ನೊಂದಾಯಿಸಿದಲ್ಲಿ ಸೂಪರ್ ಆಫರ್ ರಂತೆ ರೂ. 1,500/- ಮಾತ್ರ ಪ್ರವೇಶ ಶುಲ್ಕ ಇರುತ್ತದೆ.
ಈ ಕ್ರಿಕೆಟ್ ಪಂದ್ಯಾಟದ ಅಧ್ಯಕ್ಷತೆಯನ್ನು ಅರಣ್ಯ,ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ರಮಾನಾಥ ರೈ ವಹಿಸಲಿದ್ದಾರೆ. ಉದ್ಘಾಟನೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ನೆರವೇರಿಸಲಿದ್ದಾರೆ‌. ಮುಖ್ಯ ಅಥಿತಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಸಂಜೀವ ಪೂಜಾರಿ, ಸಜಿಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷ ಗಣಪತಿ ಭಟ್, ಪ.ಪೂ.ಕಾಲೇಜು ಸಜಿಪಮೂಡ ಶಾಲಾಭಿವೃಧ್ಧಿ ಅಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸಜಿಪಮೂಡ ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ ಬೆಳ್ಚಾಡ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ಡಿ.ದೇರಾಜೆ, ಸಜಿಪ ಮೂಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಮಲ್ಪೆ ಹಮೀದ್ ಮುನ್ನೂರು, ಉದ್ಯಮಿ ಶಾಫಿ ಕೋಡಿ,  ರಫೀಕ್ ಕೊಳಕೆ, ರಹ್ಮಾನ್ ಬೋಳಮೆ, ನವೀನ್ ಕೂಡೂರು, ಯಂಗ್ ಮೆನ್ಸ್ ಉರ್ವ ತಂಡದ ಆಟಗಾರ ಮನ್ಸೂರ್ ರಂತಡ್ಕ, ಶಾಫಿ ಕೊಳಕೆ, ಸ್ವಾಲಿ ಸಜಿಪ ಹಾಗೂ ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ ಆಗಮಿಸಲಿದ್ದಾರೆ ಎಂದು ಎಸ್.ಎಂ.ಎಸ್‌. ಫ್ರೆಂಡ್ಸ್ ಕೊಳಕೆ ಪ್ರಕಟನೆಯಲ್ಲಿ ತಿಳಿಸಿದೆ.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ