ವಿಶ್ವವಿದ್ಯಾನಿಲಯದ ಅವ್ಯವಸ್ಥಿತ ಪರೀಕ್ಷೆ ಹಾಗೂ ಮೌಲ್ಯಮಾಪನ ಪದ್ಧತಿ, ದೋಷಪೂರಿತ ಫಲಿತಾಂಶ ಮತ್ತು ಅಂಕಪಟ್ಟಿ ವಿತರಣೆಯಲ್ಲಿ ವಿಳಂಬ ಧೋರಣೆಯ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಂಟ್ವಾಳ ಶಾಖೆ ವತಿಯಿಂದ ಪ್ರತಿಭಟನೆ ನಡೆಯಿತು. ಬಳಿಕ ಬಂಟ್ವಾಳ ತಾಲೂಕು ತಹಶೀಲ್ದಾರರಿಗೆ ಮನವಿಯನ್ನು ಹಸ್ತಾಂತರಿಸಿ, ಅವರ ಮೂಲಕ ಸಂಬಂಧಿತ ಅಧಿಕಾರಿಗಳಿಗೆ ಕಳುಹಿಸಿಕೊಡಲಾಯಿತು.
ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್, ಪುತ್ತೂರು ಜಿಲ್ಲಾ ಸಂಚಾಲಕ ಪ್ರಜ್ವಲ್, ಜಿಲ್ಲಾವಿದ್ಯಾರ್ಥಿನಿ ಪ್ರಮುಖ್ ಮೇಧಾ ರಾಮಕುಂಜ, ಬಂಟ್ವಾಳ ನಗರ ಕಾರ್ಯದರ್ಶಿ ಚರಿತ್ ಕುಮಾರ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿಭಾಗ ಸಂಚಾಲಕ ಪ್ರಣಾಮ್ ರಾಜ್, ಎಸ್.ವಿ.ಎಸ್. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೀಷ್, ಪ್ರಮುಖರಾದ ಸತ್ಯಶಂಕರ್, ಆಶಿಷ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…