ಪಡಿತರ ಚೀಟಿ ಪರಿಶೀಲನಾ ಕಾರ್ಯದಿಂದ ಮುಕ್ತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮಲೆಕ್ಕಾಧಿಕಾರಿಗಳು ರಾಜ್ಯಾದ್ಯಂತ ಸಾಮೂಹಿಕ ರಜೆ ಹಾಕಿ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿ ಡಾ.ಜಗದೀಶ್ ಅವರಿಗೆ ಜಿಲ್ಲಾ ಪದಾಧಿಕಾರಿಗಳು ಮನವಿ ಅರ್ಪಿಸಿದರು.ಮಾತೃ ಇಲಾಖೆ ವಹಿಸುತ್ತಿರುವ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿರುವ ಗ್ರಾಮಲೆಕ್ಕಾಧಿಕಾರಿಗಳು ಇನ್ನೂ ಮೂಲ ಸೌಕರ್ಯಗಳಾದ ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಯ ವಿಲೇವಾರಿ ಮತ್ತು ಇನ್ನಿತರ ಸಕಾಲ ಯೋಜನೆಯ ನಾನಾ ರೀತಿಯ ಅರ್ಜಿಗಳ ವಿಲೇವಾರಿ ಕಾರ್ಯ, ಇನ್ ಪುಟ್ ಸಬ್ಸಿಡಿಗೆ ಸಂಬಂಧಿಸಿದ ಕಾರ್ಯ, ಕೆರೆಗಳ ಮಾಹಿತಿ, ಭೂಮಿ ಕೇಂದ್ರದಲ್ಲಿ ಅನುಮೋದನೆ ಪ್ರಕ್ರಿಯೆ, ಕೃಷಿ ಮಾಹಿತಿ, ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದ ಡಾಟಾಶೀಟ್ ಮಾಹಿತಿ ಸಂಗ್ರಹಣಾ ಕಾರ್ಯ, ವಿವಾಹ ನೋಂದಣಿ, ಜನನ- ಮರಣ ದಾಖಲಾತಿ ಹಿಂಗಾರು ಬೆಳೆ ಹಾನಿ ಸಮೀಕ್ಷೆ ಪಹಣಿಯಲ್ಲಿ ಬೆಳೆ ನಮೂದು ಜಮಾಬಂದಿ. ಸರಕಾರಿ ಒತ್ತುವರಿ ತೆರವು. ಓಟಿಸಿ.ಬೆಳೆ ಕಟಾವು ಪ್ರಯೋಗ ಹೀಗೆ ಅನೇಕ ಕೆಲಸ ಕಾರ್ಯಗಳು ಗ್ರಾಮ ಲೆಕ್ಕಾಧಿಕಾರಿಗಳ ಮೇಲಿರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಗ್ರಾಮ ಲೆಕ್ಕಾಧಿಕಾರಿಗಳ ವೈಯಕ್ತಿಕ ಜೀವನ ನಿರ್ವಹಣೆ ಕ್ಲಿಷ್ಟಕರವಾಗಿದೆ ಎಂದು ಗ್ರಾಮಲೆಕ್ಕಾಧಿಕಾರಿಗಳು ತಿಳಿಸಿದರು.
ಈ ಸಂದರ್ಭ ಕಂದಾಯ ನೌಕರರ ಸಂಘದ ಅಧ್ಯಕ್ಷ ಹಾಗೂ ಉಪ ತಹಶೀಲ್ದಾರ್ ಸೀತಾರಾಮ. ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾದ್ಯಕ್ಷ ಪೂರ್ಣ ಚಂದ್ರ ತೇಜಸ್ವಿ. ಮಂಗಳೂರು ತಾಲೂಕು ಅದ್ಯಕ್ಷ ಸಿ ಆರ್ ಮಹೇಶ್. ಬಂಟ್ವಾಳ ತಾಲೂಕು ಅದ್ಯಕ್ಷ ಜನಾರ್ಧನ್. ಬೆಳ್ತಂಗಡಿ ತಾಲೂಕು ಅದ್ಯಕ್ಷ ಪ್ರದೀಪ್. ಸುಳ್ಯ ತಾಲೂಕು ಅದ್ಯಕ್ಷ ಹೊನ್ನಪ್ಪ ಗೌಡ. ಪುತ್ತೂರು ತಾಲೂಕು ಅದ್ಯಕ್ಷ ಹರೀಶ್ ಹೆಗ್ಡೆ ಇದ್ದರು.