ಫೆ.28 ರಿಂದ ಮಾರ್ಚ್ 5 ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಮಾರ್ಚ್ 4 ರಂದು ತಿರುಮಲ ವೆಂಕಟರಮಣ ಸ್ವಾಮಿಗೆ ವೈಭವದ ಬ್ರಹ್ಮರಥೋತ್ಸವ
ಬಂಟ್ವಾಳ ಗೌಡ ಸಾರಸ್ವತ ಬ್ರಾಹ್ಮಣ ವೃಂದದವರ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಕಾರ್ಯಕ್ರಮಗಳು ಫೆ.28ರಿಂದ ಆರಂಭಗೊಂಡು, ಮಾರ್ಚ್ 5 ವರೆಗೆ ನಡೆಯಲಿದೆ.
ಫಾಲ್ಗುಣ ಶುದ್ಧ ೨ರ ಫೆ.28ರಂದು ಧ್ವಜಾರೋಹಣ, ಮಾರ್ಚ್ 3 ರಂದು ಪಂಚಾಮೃತಾಭಿಷೇಕ, ಪುಳಕಾಭಿಷೇಕ, ಭಾಗೀರಥಿ ಅಭಿಷೇಕ, ಕನಕಾಭಿಷೇಕ, ಜಲಕ್ರೀಡೆ, ಮೃಗಯಾತ್ರೋತ್ಸವ, ಬೆಳ್ಳಿ ರಥೋತ್ಸವ, ಮಾರ್ಚ್ 4 ರಂದು ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಪುಳಕಾಭಿಷೇಕ, ಭಾಗೀರಥಿ ಅಭಿಷೇಕ, ಕನಕಾಭಿಷೇಕ ಹಾಗೂ ಶ್ರೀ ಬ್ರಹ್ಮರಥೋತ್ಸವ ನಡೆಯುವುದು. 5 ರಂದು ಅವಭೃತೋತ್ಸವ ಮೊದಲಾದ ವಿನಿಯೋಗ, ಸಮಾರಾಧನೆಗಳು ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಮಾಣೂರು ಲಕ್ಷ್ಮಣ ಕಾಮತ್, ಮೊಕ್ತೇಸರರಾದ ಆರ್ಲ ದಾಮೋದರ ಪ್ರಭು, ಬಿ.ಪುರುಷೋತ್ತಮ ಶೆಣೈ ಹಾಗೂ ದೇವಸ್ಥಾನದ ಶಿಲೆ ಶಿಲೆ ಹಕ್ಕಿನ ಮೊಕ್ತೇಸರರಾದ ಡಾ.ಬಿ.ಸೂರ್ಯನಾರಾಯಣ ಬಾಳಿಗಾ ಬಂಟ್ವಾಳ, ಬಿ.ಗೋಪಾಲಕೃಷ್ಣ ಕಾಮತ್ ಮುಂಬೈ, ಎನ್. ಭಂಡಾರ್ಕಾರ್ ಮುಂಬೈ, ಬಿ.ರಾಮಕೃಷ್ಣ ಪ್ರಭು ಹೈದರಾಬಾದ್, ವಿ.ಪಿ.ಕಾಮತ್, ಬಿ.ದಿನೇಶ್ ರಾವ್ ಬೆಂಗಳೂರು ಮತ್ತು ಪ್ರಬಂಧಕರಾದ ಕೆ.ನರಸಿಂಹ ಕಾಮತ್ ಹಾಗೂ ಪಾರುಪತ್ಯಗಾರ ಎಂ.ರತ್ನಾಕರ ನಾಯಕ್ ತಿಳಿಸಿದ್ದಾರೆ.
೨೮ರಂದು ಬೆಳಗ್ಗೆ ೮.೩೦ರಿಂದ ಮಹಾಪೂಜಾರಂಭ, ಅಭಿಷೇಕಾದಿಗಳು, ೧೧.೩೦ಕ್ಕೆ ಯಜ್ಞಾರಂಭ, ಮಧ್ಯಾಹ್ನ ೩.೩೦ಕ್ಕೆ ಯಜ್ಞಾರತಿ, ೪.೩೦ಕ್ಕೆ ಧ್ವಜಾರೋಹಣ, ಬಲಿ, ಬೆಳ್ಳಿಪಾಲ್ಕಿ ಹಗಲೋತ್ಸವ, ಸಮಾರಾಧನೆ, ರಾತ್ರಿ ೮.೩೦ಕ್ಕೆ ದೀಪ ನಮಸ್ಕಾರ, ರಾತ್ರಿ ಬಲಿ, ಗೋಪುರೋತ್ಸವ, ಗರುಡೋತ್ಸವ, ೧೧ಕ್ಕೆ ವಸಂತ ಪೂಜೆ ಇತ್ಯಾದಿಗಳು ನಡೆಯುವುದು.
ಮಾರ್ಚ್ ೧ರಂದು ಬುಧವಾರ ಬೆಳಗ್ಗೆ ಮಹಾಪೂಜಾರಂಭ ಅಭಿಷೇಕಾದಿಗಳು, ೧೧.೩೦ಕ್ಕೆ ಯಜ್ಞಾರಂಭ, ಮಧ್ಯಾಹ್ನ ೩.೩೦ಕ್ಕೆ ಯಜ್ಞಾರತಿ, ಬಲಿ ಬೆಳ್ಳಿಪಾಲ್ಕಿ ಹಗಲೋತ್ಸವ, ಸಮಾರಾಧನೆ, ರಾತ್ರಿ ೮.೩೦ಕ್ಕೆ ದೀಪ ನಮಸ್ಕಾರ, ರಾತ್ರೆ ಬಲಿ, ಗೋಪುರೋತ್ಸವ, ಹನುಮಂತೋತ್ಸವ ನಡೆಯಲಿದೆ
ಮಾರ್ಚ್ ೨ರಂದು ಬೆಳಗ್ಗೆ ೯ಕ್ಕೆ ಮಹಾಪೂಜಾರಂಭ, ಅಭಿಷೇಕಾದಿಗಳು, ಮಧ್ಯಾಹ್ನ ೧ಕ್ಕೆ ಯಜ್ಞಾರಂಭ, ಯಜ್ಞಾರತಿ, ಬಲಿ, ಬೆಳ್ಳಿ ಲಾಲ್ಕಿ ಹಗಲೋತ್ಸವ, ಸಮಾರಾಧನೆ, ರಾತ್ರಿ ೮.೩೦ಕ್ಕೆ ದೀಪ ನಮಸ್ಕಾರ, ರಾತ್ರೆ ಬಲಿ, ಗೋಪುರೋತ್ಸವ ಚಂದ್ರಮಂಡಲೋತ್ಸವ ನಡೆಯುತ್ತದೆ.
ಮಾರ್ಚ್ ೩ರಂದು ಸಣ್ಣ ರಥೋತ್ಸವ ನಡೆಯಲಿದೆ. ಅಂದು ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ೪.೩೦ಕ್ಕೆ ಯಜ್ಞಾರತಿ, ಬಲಿ, ಬೆಳ್ಳಿಪಾಲ್ಕಿ ಹಗಲೋತ್ಸವ, ಸಮಾರಾಧನೆ, ರಾತ್ರಿ ೧೦ ಗಂಟೆಗೆ ದೀಪ ನಮಸ್ಕಾರ, ರಾತ್ರೆ ಬಲಿ ಜಲಕ್ರೀಡೋತ್ಸವ, ಗೋಪುರೋತ್ಸವ, ಮೃಗಬೇಟೆ, ಬೆಳ್ಳಿ ಲಾಲ್ಕಿ ಉತ್ಸವ, ಬೆಳ್ಳಿ ರಥೋತ್ಸವ, ವಸಂತ ಪೂಜೆ ನಡೆಯಲಿವೆ.
ಮಾರ್ಚ್ ೪ರಂದು ಜೀರ್ಣೋದ್ಧಾರ ಪುನರ್ ಪ್ರತಿಷ್ಠೆ ದಿನವಾಗಿದ್ದು, ಅಂದು ಬ್ರಹ್ಮರಥೋತ್ಸವ ನಡೆಯಲಿದೆ ಬೆಳಗ್ಗೆ ೭ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಎಯಲಿದ್ದು, ಸಂಜೆ ೫.೩೦ಕ್ಕೆ ಬ್ರಹ್ಮರಥಾರೋಹಣ, ಸಮಾರಾಧನೆ, ರಾತ್ರಿ ೧ ಗಂಟೆಗೆ ಬ್ರಹ್ಮರಥೋತ್ಸವ ಹಾಗೂ ರಾತ್ರಿ ೩.೩೦ಕ್ಕೆ ವಸಂತ ಪೂಜೆ ಇತ್ಯಾದಿ ಕಾರ್ಯಕ್ರಮಗಳು ವೈಭವದಿಂದ ಜರಗುವುದು. ಮಾರ್ಚ್ ೫ರಂದು ಭಾನುವಾರ ಅವಭೃತೋತ್ಸವ, ರಾತ್ರಿ ೧ಕ್ಕೆ ಸಣ್ಣ ರಥೋತ್ಸವ ನಡೆಯಲಿದೆ.