ಇರಂದೂರು ಶ್ರೀ ನರಸಿಂಹ ದೇವರ ಕ್ಷೇತ್ರದಲ್ಲಿ ಮೂರನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ಶ್ರೀ ದುರ್ಗಾ ಪೂಜೆ ಮತ್ತು ಧಾರ್ಮಿಕ ಸಭೆ ನಡೆಯಿತು.
ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ವಿಟ್ಲ, ಅಂತರಾಷ್ಟ್ರೀಯ ಕಾರು ಮತ್ತು ಬೈಕ್ ರ್‍ಯಾಲಿ ಚಾಂಪಿಯನ್ ಅಶ್ವಿನ್ ನಾಕ್ ಮಿಜಾರು ಎಡಪದವು, ವಿಟ್ಲ ಉಕ್ಕುಡ ಶಾಖೆಯ ಉಪವಲಯ ಅರಣ್ಯಾಕಾರಿ ಲೋಕೇಶ್ ಯನ್, ಯನ್ ಭಾಗವಹಿಸಿದ್ದರು.
ಶ್ರೀ ಲಕ್ಷ್ಮೀನರಸಿಂಹ ಸೇವಾ ಸಮಿತಿಯ ಅಧ್ಯಕ್ಷ ಸದಾಶಿವ ಆಚಾರ್ಯ, ಗೌರವ ಸಲಹೆಗಾರ ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಲತಾ ಅಶೋಕ್ ಪೂಜಾರಿ, ಹಿರಿಯರಾದ ಪದ್ಮನಾಭ ಗೌಡ ಮತ್ತು ಬಟ್ಯ ಗೌಡ ಉಪಸ್ಥಿತರಿದ್ದರು. ಎಂ ಕೆ ಕುಲಾಲ್ ಪ್ರಸ್ತಾವಿಸಿ ಸ್ವಾಗತಿಸಿದರು. ರಾಮಣ್ಯ ಸಪಲ್ಯ ವರದಿ ವಾಚಿಸಿದರು. ಹರೀಶ್ ಎಸ್ ಪಿ ವಂದಿಸಿದರು.
ದಿನೇಶ್ ಮಾಮೇಶ್ವರ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಸಹಕರಿಸಿದರು. ಧಾರ್ಮಿಕ ಸಭೆಯ ನಂತರ ಶ್ರೀ ಉಮಾಮಹೇಶ್ವರ ರೋಡ್‌ಲೈನ್ಸ್ ಇವರ ಪ್ರಾಯೋಜಕತ್ವದಲ್ಲಿ ಕಲ್ಲಡ್ಕದ ವಿಠಲ ನಾಯಕ್ ಮತ್ತು ಬಳಗದವರಿಂದ ‘ಗೀತ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ನಡೆಯಿತು.