ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ವಾಸದ ಮನೆಗಳು ಬಡವರಿಗೆ ಸಂಬಂಧಿಸಿದ ಕಾರಣ, ಅವರ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟು ಕಲಂ 94 ಸಿ ಮತ್ತು 94 ಸಿಸಿ ರಡಿಯಲ್ಲಿ ನಿಗಧಿಪಡಿಸಿರುವ ಶುಲ್ಕವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಕಲಂ 94 ಸಿ ಅಡಿ – 30*40 ವಿಸ್ತೀರ್ಣ (1200 ಚದರ ಅಡಿ), ಸಾಮಾನ್ಯ -ರೂ.1000, ಪರಿಶಿಷ್ಟ ಜಾತಿ/ ಪ.ಪಂ/ ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ – ರೂ.500,
40*60 ವಿಸ್ತೀರ್ಣ (2400 ಚದರ ಅಡಿ) , ಸಾಮಾನ್ಯ- ರೂ.2000, ಪರಿಶಿಷ್ಟ ಜಾತಿ/ ಪ.ಪಂ/ ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ರೂ.1000,
50*80ವಿಸ್ತೀರ್ಣ (4000 ಚದರಡಿ), ಸಾಮಾನ್ಯ ರೂ.3000, ಪರಿಶಿಷ್ಟ ಜಾತಿ/ ಪ.ಪಂ/ ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ರೂ.1,500.
94 ಸಿಸಿ – ವಿಸ್ತೀರ್ಣ 20*30 ವಿಸ್ತೀರ್ಣ, (600 ಚದರ ಅಡಿ ), ಸಾಮಾನ್ಯ- ರೂ.5000, ಪರಿಶಿಷ್ಟ ಜಾತಿ/ ಪ.ಪಂ/ ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ರೂ.1,500 ಶುಲ್ಕ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.