ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಎಂಬಲ್ಲಿ ಪಿಗ್ಮಿ ಸಂಗ್ರಾಹಕಿ ಹಾಗೂ ಕಳೆದ ಬಾರಿ ತಾಲೂಕು ಪಂಚಾಯಿತಿಗೆ ಸ್ಪರ್ಧಿಸಿದ್ದ ಮಹಿಳೆ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯ ನಿವಾಸಿ ವಿವಾಹಿತೆ ಶೈಲಜಾ (47) ಮೃತಪಟ್ಟವರು. ಕಳೆದ ಹಲವು ವರ್ಷಗಳಿಂದ ಪಿಗ್ಮಿ ಸಂಗ್ರಾಹಕಿಯಾಗಿ ದುಡಿಯುತ್ತಿದ್ದ ಅವರು, ಮನೆಯಲ್ಲಿ ನೇಣು ಬಿಗಿದು ಮೃತಪಟ್ಟಿದ್ದಾರೆ. ಪತಿ ವಾಹನ ಚಾಲಕರಾಗಿದ್ದರೆ, ಮಕ್ಕಳ ಪೈಕಿ ಓರ್ವ ಪುತ್ರಿ ಮಂಗಳೂರಿನ ಖಾಸಗಿ ಸಂಸ್ಥೆ ಉದ್ಯೋಗಿ. ಮತ್ತೋರ್ವ ಪುತ್ರಿ ಸೋಮವಾರ ಉದ್ಯೋಗ ಹಿನ್ನೆಲೆಯಲ್ಲಿ ಮನೆಯಿಂದ ಬೆಂಗಳೂರಿಗೆ ತೆರಳಿದ್ದರು. ಮಂಗಳವಾರ ಸಂಜೆ ಪತಿ ಮನೆಗೆ ಬಂದು ನೋಡಿದಾಗ ಶೌಚಾಲಯದಲ್ಲಿ ಶೈಲಜಾ ನೇಣಿಗೆ ಶರಣಾಗಿರುವುದು ಕಂಡುಬಂತು.
ತಾಲೂಕು ಪಂಚಾಯಿತಿಯಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗಗೊಂಡಿದ್ದ ಅವರ ಸಾವಿನ ತನಿಖೆಯನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಮಾಡುತ್ತಿದ್ದಾರೆ. ಪ್ರಕರಣ ದಾಖಲಾಗಿದೆ.