ಬಂಟ್ವಾಳ ಎಪಿಎಂಸಿ ಅಧ್ಯಕ್ಷರಾಗಿ ಪಾಣೆಮಂಗಳೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಕೆ.ಪದ್ಮನಾಭ ರೈ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಕಡೇಶ್ವಾಲ್ಯ ಕ್ಷೇತ್ರದಿಂದ ಆಯ್ಕೆಯಾದ ಚಂದ್ರಶೇಖರ ಪೂಜಾರಿ ಚುನಾಯಿತರಾದರು. ಇಬ್ಬರೂ ಕಾಂಗ್ರೆಸ್ ಬೆಂಬಲಿತರು.
www.bantwalnews.com report
ಎಪಿಎಂಸಿಯಲ್ಲಿ ಒಟ್ಟು 13 ಚುನಾಯಿತ ಹಾಗೂ ಮೂವರು ನಾಮನಿರ್ದೇಶಿತ ಸದಸ್ಯರಿದ್ದು, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವೇಳೆ ನಾಮನಿರ್ದೇಶಿತ ಸದಸ್ಯರ ಮತ ಗಣನೆಗೆ ಬರುತ್ತದೆ. ಹೀಗಾಗಿ ಈ ಬಾರಿ ನಾಮನಿರ್ದೇಶಿತರೇ ಆಯ್ಕೆಗೆ ಕಾರಣರಾದರು. 13 ಸದಸ್ಯರ ಪೈಕಿ ಬಿಜೆಪಿ 7 ಹಾಗೂ ಕಾಂಗ್ರೆಸ್ 6 ಬೆಂಬಲಿತರನ್ನು ಹೊಂದಿತ್ತು. ಆದರೆ ಮೂವರು ನಾಮನಿರ್ದೇಶಿತರ ಬೆಂಬಲದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಿಯಾದರು.
ನಡೆದ ಚುನಾವಣೆ:
ಬಿಜೆಪಿ ಸದಸ್ಯರಾದ ನೇಮಿರಾಜ ರೈ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಗೀತಾಲತಾ ಶೆಟ್ಟಿ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದರೆ, ಕಾಂಗ್ರೆಸ್ ನಿಂದ ಪದ್ಮನಾಭ ರೈ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಚಂದ್ರಶೇಖರ ಪೂಜಾರಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಯಾರೂ ನಾಮಪತ್ರ ಹಿಂತೆಗೆಯದ ಕಾರಣ ಚುನಾವಣೆ ಮತದಾನದ ಮೂಲಕ ನಡೆಯಿತು.
ಪದ್ಮನಾಭ ರೈ ಮತ್ತು ಚಂದ್ರಶೇಖರ ಪೂಜಾರಿ ತಲಾ 9 ಮತಗಳನ್ನು ಗಳಿಸಿ ಆಯ್ಕೆಯಾದರೆ, ನೇಮಿರಾಜ ರೈ ಮತ್ತು ಗೀತಾಲತಾ ಶೆಟ್ಟಿ ಅವರಿಗೆ 7 ಮತಗಳು ಲಭಿಸಿದವು.
ತಹಶೀಲ್ದಾರ್ ಕೆ.ಪುರಂದರ ಹೆಗ್ಡೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭ ಎಪಿಎಂಸಿ ಕಾರ್ಯದರ್ಶಿ ಭಾರತಿ ಪಿ.ಎಸ್ ಉಪಸ್ಥಿತರಿದ್ದರು. ಬಂಟ್ವಾಳ ಠಾಣಾ ಎಸ್ ಐ ನಂದಕುಮಾರ್ ಬಂದೋಬಸ್ತ್ ಏರ್ಪಡಿಸಿದ್ದರು.
ಅಭಿನಂದನೆ:
ಚುನಾವಣಾ ಆಯ್ಕೆ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪದ್ಮನಾಭ ರೈ, ಅನುಭವದ ಹಾಗೂ ಸರಕಾರದ ನೆರವು ಪಡೆದು ಆಡಳಿತ ನಡೆಸುವ ಭರವಸೆ ನೀಡಿದರು. ಈ ಸಂದರ್ಭ ಅವರನ್ನು ಸಭಾಂಗಣದ ಹೊರಗೆ ಸೇರಿದ್ದ ಕಾಂಗ್ರೆಸ್ ನಾಯಕರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಅಬ್ಬಾಸ್ ಆಲಿ ಸಹಿತ ಪಕ್ಷ ಪ್ರಮುಖರು ಅಭಿನಂದನೆ ಸಲ್ಲಿಸಿದರು.
ಬಂಟ್ವಾಳ ಎಪಿಎಂಸಿಯ ಸದಸ್ಯರಿವರು.
1. ಸಂಗಬೆಟ್ಟು (ಸಾಮಾನ್ಯ ಕ್ಷೇತ್ರ) ಪದ್ಮರಾಜ ಬಲ್ಲಾಳ ಮಾವಂತೂರು (ಕಾಂಗ್ರೆಸ್ ಬೆಂಬಲಿತರು)