ಜಯಕರ್ನಾಟಕ ಉಕ್ಕುಡ ಘಟಕ ಹಾಗೂ ದಕ್ಷಿಣ ಕನ್ನಡ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಹೊನಲು ಬೆಳಕಿನ ಪ್ರೋ ಮಾದರಿಯ ಅಂತರ್ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಬ್ರದರ್‍ಸ್ ಕಂದೇಲ್ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಆಳ್ವಾಸ್ ಮೂಡಬಿದಿರೆ ದ್ವಿತೀಯ, ಅರಬ್ ರೈಡರ್‍ಸ್ ತೂಮಿನಾಡ್ ತೃತೀಯ ಸ್ಥಾನ, ಎಸ್‌ಡಿಎಂ ಉಜಿರೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಈ ಸಂದರ್ಭ ಮಾತನಾಡಿದ ಕರ್ನಾಟಕ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ರವಿಕಿರಣ್ ಪುಣಚ ಕೂಡಾಕೂಟಗಳಿಂದ ದೇಶದ ಸೌಹಾರ್ಧತೆ ಉಳಿಯಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಈ ದೇಶದಲ್ಲಿ ಬಹುತೇಕ ಕ್ರೀಡೆಗಳು ಹೊರದೇಶದಿಂದ ಬಂದಿದ್ದಾಗಿದೆ. ಕಬಡ್ಡಿ ಮಾತ್ರ ಇಲ್ಲಿಯ ಮಣ್ಣಿನ ಆಟವಾಗಿದೆ. ಕಬ್ಬಡಿ ಕ್ರೀಡೆಗಳ ಮೂಲಕ ದೇಶದ ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯಲು ಸಾಧ್ಯ ಎಂದರು.
ಕರಾಟೆಯಲ್ಲಿ ಸಾಧ್ಯನೆಗೈದ ವಿದ್ಯಾರ್ಥಿಗಳಾದ ಮಹಮ್ಮದ್ ರಮೀಶ್, ಮಹಮ್ಮದ್ ಅಸ್ಲಂ, ಮಹಮ್ಮದ್ ಬಾಸಿಲ್, ಆಹಮ್ಮದ್ ನುಹ್‌ಮಾನ್ ಹಾಗೂ ನಿವೃತ್ತ ಯೋಧ ಸತೀಶ್ ಉಕ್ಕುಡ ಅವರನ್ನು ಸನ್ಮಾನಿಸಲಾಯಿತು.
ಯು.ಪಿ ಜಯರಾಮ ಉಕ್ಕುಡ, ರಹೀಂಶಾನ್ ಅಳಿಕೆ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಮನೋಜ್ ಪಿ, ರಮಾನಾಥ ವಿಟ್ಲ, ರಮೇಶ, ಜಯಪ್ರಕಾಶ್, ರಮೇಶ ಉಕ್ಕುಡ, ಹಮೀದ್ ಕೆಜಿಎನ್, ಕೆ ಇಸ್ಮಾಯಿಲ್, ಶರೀಫ್ ಯು, ರಂಜೀತ್ ಕುಮಾರ್, ಅಬ್ದುಲ್ ರಝಾಕ್, ರವಿ ಬಂಗೇರ, ಹಮೀದ್ ಟಿಎಚ್‌ಎಂಎ, ಹಮೀದ್ ಕೆ.ಎಸ್, ರಾಝೀಕ್ ಉಕ್ಕುಡ ಮೊದಲಾದವರು ಉಪಸ್ಥಿತರಿದ್ದರು.
ರಶೀದ್ ಉಕ್ಕುಡ ಸ್ವಾಗತಿಸಿದರು. ಹಮೀದ್ ಗೋಳ್ತಮಜಲು ನಿರೂಪಿಸಿದರು.