ಶೋಷಿತ ಜನಸಮುದಾಯದ ಮನೆಯಂಗಳದಲ್ಲಿ ಭಜನೆ ನಡೆಸಿ, ಅವರ ಮನೆಯಲ್ಲೇ ಊಟ ಸೇವಿಸಿ ನಾವೆಲ್ಲ ಒಂದು ಎಂದು ಸಾರುವ ಕಾರ್ಯವನ್ನು ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ನಡೆಸಿತು.
ಭಜನಾ ಮಂಡಳಿಯ ಆಶಯದಂತೆ ಹೊರಗೆ ಊಟ ತಯಾರಿಸದೆ , ಕಾಲೋನಿಯ ಬಂಧುಗಳೇ ತಮ್ಮ ತಮ್ಮ ಮನೆಯಲ್ಲಿ ತಾವೇ ತಯಾರಿಸಿದ ಸಿಹಿ ಊಟವನ್ನೇ ಅನ್ನ ಪ್ರಸಾದವನ್ನಾಗಿ ಭಜನಾ ಮಂಡಳಿಯ ಸರ್ವ ಸದಸ್ಯರು ಸ್ವೀಕರಿಸುವುದರೊಂದಿಗೆ ನಡೆ – ನುಡಿ ಪರಿಶುದ್ದತೆಯನ್ನು ಸಾದರ ಪಡಿಸಿದರು. ಸಮಾಜದ ಎಲ್ಲ ವರ್ಗದ ಜನರೂ ಈ ತಂಡದಲ್ಲಿದ್ದುದು ಗಮನಾರ್ಹ.
ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಕೆ ಜಗದೀಶ್ ಶೆಟ್ಟಿ , ಅಂಬೇಡ್ಕರ್ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶೀನಾ ನೆಡ್ಚಿಲ್ ಮಾತನಾಡಿದರು. ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಕೆ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಎನ್ ರಾಘವೇಂದ್ರ ನಾಯಕ್, ರವಿಕಿರಣ್ ಭಟ್, ಅನಿಲ್ ಕುಮಾರ್, ಸಂದೇಶ್ ನಟ್ಟಿಬೈಲ್ , ಗಣ್ಯರಾದ ಮಹಾಲಿಂಗ, ಶರತ್ ಕೋಟೆ, ಚಂದ್ರಶೇಖರ್, ಹರೀಶ್ ನಾಯಕ್, ಐ ಪುರುಷೋತ್ತಮ ನಾಯಕ್, ಸುಂದರ ಆದರ್ಶ ನಗರ, ಆದರ್ಶ ಶೆಟ್ಟಿ, ಅನೂಪ್ ಸಿಂಗ್ ಮೊದಲಾದ ಹಲವಾರು ಮಂದಿ ಭಾಗವಹಿಸಿದ್ದರು.
click www.bantwalnews.com to read more news