ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕೊಲೆ ಹಾಗೂ ಶ್ರೀಮಂತ ವ್ಯಕ್ತಿಗಳ ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರಿಂದ 2 ಪಿಸ್ತೂಲ್, ಸಜೀವ ಗುಂಡುಗಳು, ಚೂರಿ, ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
www.bantwalnews.com report
ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲ್ ನಿಂದ ಇತ್ತೀಚೆಗೆ ಬಿಡುಗಡೆಗೊಂಡಿದ್ದವರು ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿ ಮಾರುತಿ ಸ್ವಿಪ್ಟ್ ಕಾರು ಹಾಗೂ ರಿಕ್ಷಾವೊಂದರಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸುತ್ತಿದ್ದ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದಂತೆ ಸ್ಥಳದಲ್ಲಿದ್ದ ಕೆಎ- ಕಾರನ್ನು ಅಡ್ಡಗಟ್ಟಿ ಕಾರು ಹಾಗೂ ರಿಕ್ಷಾದಲ್ಲಿದ್ದ
ಸಫ್ವಾನ್ (33), ಮೊಹಮ್ಮದ್ ಫೈಸಲ್ ಇಬ್ರಾಹೀಂ ಶೇಖ್, ಪ್ರಾಯ(33), ಅಬ್ದುಲ್ ನಾಸಿರ್ ಯಾನೆ ಡಾನ್ ನಾಸೀರ್ (34), ಸಂಶುದ್ದೀನ್, ಪ್ರಾಯ(27), ಉಮ್ಮರ್ ಫಾರೂಕ್ (25), ಮೊಹಮ್ಮದ್ ಅನ್ಸಾರ್, ಪ್ರಾಯ(30) ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅವರ ವಶದಲ್ಲಿದ್ದ 2 ಪಿಸ್ತೂಲ್ ಗಳು, 7 ಸಜೀವ ಮದ್ದುಗುಂಡುಗಳು, 2 ಚೂರಿಗಳು, 3 ಮೊಬೈಲ್ ಫೋನ್ ಗಳು, ಮಾರುತಿ ಸ್ವಿಪ್ಟ್ ಕಾರು, ಬಜಾಜ್ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವ್ಯಕ್ತಿಯೊಬ್ಬರ ಕೊಲೆಗೆ ಹಾಗೂ ಶ್ರೀಮಂತ ವ್ಯಕ್ತಿಗಳ ದರೋಡೆಗಾಗಿ ಸಂಚು ರೂಪಿಸುತ್ತಿದ್ದರು.
ಆರೋಪಿಗಳ ಪೈಕಿ ಸಫ್ವಾನ್ ಹುಸೈನ್ ಎಂಬಾತನ ವಿರುದ್ದ ಈ ಹಿಂದೆ ಕೊಲೆ, ಕೊಲೆಗೆ ಪ್ರಯತ್ನ, ಅಪಹರಣ, ದರೋಡೆ, ಕರ್ತವ್ಯ ನಿರತ ಪೊಲೀಸರ ಹಲ್ಲೆ ಮುಂತಾದ ಒಟ್ಟು 23 ಪ್ರಕರಣಗಳು ದಾಖಲಾಗಿದ್ದುದಲ್ಲದೇ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮೊಹಮ್ಮದ್ ಫೈಸಲ್ ಇಬ್ರಾಹೀಂ ಶೇಖ್ ಎಂಬಾತನ ವಿರುದ್ಧ ಕೊಲೆಗೆ ಯತ್ನ, ದರೋಡೆ, ಜೈಲ್ ನಲ್ಲಿ ಗಲಾಟೆ ಮುಂತಾದ ಒಟ್ಟು 8 ಪ್ರಕರಣಗಳು ದಾಖಲಾಗಿವೆ.
ಸಂಶುದ್ದೀನ್ ಎಂಬಾತನ ವಿರುದ್ಧ ಕೊಲೆ, ಕೊಲೆಗೆ ಯತ್ನ, ಅಪಹರಣ, ದರೋಡೆ, ಜೈಲ್ ನಲ್ಲಿ ಗಲಾಟೆ ಮುಂತಾದ ಒಟ್ಟು 8 ಪ್ರಕರಣಗಳು ದಾಖಲಾಗಿವೆ.
ಡಾನ್ ನಾಸೀರ್ ಎಂಬಾತನ ವಿರುದ್ಧ ಕೊಲೆಯತ್ನ, ಅಪಹರಣ, ದರೋಡೆ, ಕೋಮು ಗಲಭೆ ಮುಂತಾದ ಒಟ್ಟು 9 ಪ್ರಕರಣಗಳು ದಾಖಲಾಗಿರುತ್ತದೆ.
ಉಮರ್ ಫಾರೂಕ್ ಈತನ ವಿರುದ್ದ ಮೂರು ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ ಒಂದು ಕೊಲೆ ಯತ್ನ, ದರೋಡೆ ಯತ್ನ ಹಾಗೂ ಹಲ್ಲೆ ಪ್ರಕರಣವಾಗಿರುತ್ತದೆ.
ಮೊಹಮ್ಮದ್ ಅನ್ಸಾರ್ ಮೇಲೆ ಈಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪತ್ತೆ ಕಾರ್ಯಚಾರಣೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್, ಸಬ್ ಇನ್ಸಪೆಕ್ಟರ್ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಯವರಾದ ರಾಮ ಪೂಜಾರಿ, ಶೀನಪ್ಪ, ಗಣೇಶ್, ಚಂದ್ರಹಾಸ ಸನಿಲ್, ಚಂದ್ರಶೇಖರ, ಚಂದ್ರ, ಯೋಗೀಶ, ಸುನಿಲ್, ಪ್ರಶಾಂತ್ ಶೆಟ್ಟಿ, ರಾಜೇಂದ್ರ ಪ್ರಸಾದ್, ದಾಮೋದರ, ಮಣಿ, ಅಬ್ದುಲ್ ಜಬ್ಬಾರ್, ಸುಧೀರ್ ಶೆಟ್ಟಿ, ಇಸಾಕ್, ಅಶಿತ್ ವಿಶಾಲ್ ಡಿ ಸೋಜಾ, ತೇಜಕುಮಾರ್ ರವರು ಭಾಗವಹಿಸಿದ್ದರು.