ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ತಂಬಾಕುಮುಕ್ತ ಜೀವನದ ಬಗ್ಗೆ ಮಾಹಿತಿ ಕಾರ್‍ಯಕ್ರಮ ಇತ್ತೀಚೆಗೆ ನಡೆಯಿತು.
ಈ ಸಂದರ್‍ಭ ಮಾತನಾಡಿದ ಡಾ.ಜಗನ್ನಾಥ, ತಂಬಾಕು ಸೇವನೆ ಆರೋಗ್ಯದ ಮೇಲೆ ಅನೇಕ ದುಷ್ಟಾರಿಣಾಮಗಳನ್ನು ಬೀರುತ್ತದೆ. ಕ್ಯಾನ್ಸರ್, ಶ್ವಾಸಕೋಶದಂತಹ ಅನೇಕ ತೊಂದರೆಗಳು ಇದರಿಂದ ಸಂಭವಿಸುತ್ತದೆ. ಪ್ರತಿವರ್ಷವು ೧೦ ಲಕ್ಷ ಜನರು ಇದರಿಂದ ಸಾವನ್ನಪುತ್ತಿದ್ದಾರೆ ಎಂಬುದು ಸಮೀಕ್ಷೆಯ ವರದಿ. ಆದುದರಿಂದ ಸಮಾಜದಲ್ಲಿ ತಂಬಾಕು ಸೇವನೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವುದು ಪ್ರತಿಯೊಬ್ಬನ ಕರ್ತವ್ಯ ಎಂದರು.
ನಿಟ್ಟೆ ಯುನಿವರ್ಸಿಟಿ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಡಿಪಾರ್‍ಟ್‌ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮ ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್, ಕೆ. ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ನಿಟ್ಟೆಯ ಡಾ| ಪ್ರಶಾಂತ್ ಉಪಸ್ಥಿತರಿದ್ದರು. ಸಹಶಿಕ್ಷಕ ಜಿನ್ನಪ್ಪ ಕಾರ್ಯಕ್ರಮ ನಿರೂಪಿಸಿದರು.