ಬಂಟ್ವಾಳ

61.36 ಲಕ್ಷ ರೂ ಮಿಗತೆ ಆಯವ್ಯಯ: ಇದು ಬಂಟ್ವಾಳ ಪುರಸಭೆ ಬಜೆಟ್

ಒಟ್ಟು 61.36 ಲಕ್ಷ ರೂ ಮಿಗತೆ ಬಜೆಟ್ ಅನ್ನು 2017-18ನೇ ಸಾಲಿಗೆ ಬಂಟ್ವಾಳ ಪುರಸಭೆಯಲ್ಲಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಶನಿವಾರ ಮಂಡಿಸಿದರು. ಇಲ್ಲಿನ ಅಂಕಿ, ಅಂಶಕ್ಕೂ ಆಯವ್ಯಯಕ್ಕೂ ವ್ಯತ್ಯಾಸ ಇರುವುದನ್ನು ಬಿಜೆಪಿ ಸದಸ್ಯ ದೇವದಾಸ ಶೆಟ್ಟಿ ಲಿಖಿತವಾಗಿಯೇ ತಿಳಿಸಿದರು. ಕೊನೆಗೆ ಬಹುಮತದಿಂದ ಪುರಸಭೆ ಬಜೆಟ್ ಅಂಗೀಕಾರ ದೊರಕಿತು.

4.60 ಕೋ.ರೂ.ಆರಂಭಿಕ ಶುಲ್ಕ, 20.85 ಕೋ.ರೂ.ಜಮೆ , 24.85 ಕೋ.ರೂ.ಖಚ೯ನ್ನು ಅಂದಾಜಿಸಲಾಗಿದೆ ಎಂದು ಅಧ್ಯಕ್ಷ ಆಳ್ವ ಹೇಳಿದರು.

ಜಾಹೀರಾತು

ಮುಖ್ಯಮಂತ್ರಿಯವರ ವಿಶೇಷ ಅನುದಾನ ಮೂರು ಕೋ.ರೂ.ವನ್ನ ಚರಂಡಿ , ಕಟ್ಟಡ, ರಸ್ತೆಗಳ ಕಾಮಗಾರಿಗೆ ಕಾದಿರಿಸಲಾಗಿದೆ. ಘನತ್ಯಾಜ್ಯ ಸಂಸ್ಕರಣ ಘಟಕದ ನಿವೇಶನದಲ್ಲಿ ಎರೆಹುಳಗೊಬ್ಬರ ತಯಾರಿಕೆ , ಕಸ ವಿಂಗಡಣೆ, ಪ್ಲ್ಯಾಟ್ ಫಾರ್ಮ್ ರಚನೆ, ರಸ್ತೆ ಅಭಿವೃದ್ಧಿ, ನೀರು ಪೂರೈಕೆಗೆ ಪಂಪ್ ಒದಗಣೆ ಹಾಗೂ ನೀರು ಸರಬರಾಜು ಪುನಶ್ಚೇತನಕ್ಕೆ ಅನುದಾನ ಕಾದಿರಿಸಾಗಿದೆ ಎಂದರು.

ಶೇ.24.30 ನಿಧಿಗೆ ಎಸ್.ಎಫ್.ಸಿ. 45.27 ಲಕ್ಷ, ಪುರಸಭಾ ನಿಧಿಯಿಂದ 5.89 ಲಕ್ಷ, ಶೇ.7.25 ನಿಧಿಗೆ ಎಸ್‌ಎಫ್ ಸಿ 13.75 ಲಕ್ಷ, ಪುರಸಭಾ ನಿಧಿಯಿಂದ 1.77 ಲಕ್ಷ, ಶೇ.3 ನಿಧಿಗೆ 5.69 ಲಕ್ಷ , ಪುರಸಭಾ ನಿಧಿಯಿಂದ 0.73 ಲಕ್ಷ ಕಾದಿರಿಸಲಾಗಿದೆ ಎಂದು ವಿವರಿಸಿದರು.

ಆದರೆ ಬಜೆಟ್ ಮಂಡನೆ ವಿಧಾನಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಜೆಟ್ ಪುಸ್ತಕವನ್ನು ತಡವಾಗಿ ವಿತರಿಸಿದ್ದು ಒಂದು ಕಾರಣವಾದರೆ, ಪುಸ್ತಕದಲ್ಲಿ ಹಲವು ಲೋಪಗಳಿವೆ ಎಂದು ಗಮನ ಸಳೆದರು.

2016 ರ ಎಪ್ರಿಲ್ ನಿಂದ ದಶಂಬರ್ ವರೆಗಿನ ಕೆಲವೂಂದು ಆದಾಯದ ಬಗ್ಗೆ ಬಜೆಟ್ ಪುಸ್ತಕದಲ್ಲಿ ದಾಖಲಾದ ಮೊತ್ತ ಹಾಗೂ ತಿಂಗಳ ಸಾಮಾನ್ಯ ಸಭೆಯಲ್ಲಿ ನೀಡಲಾಗುವ ಜಮಾಖಚಿ೯ನ ಲೆಕ್ಕದ ಮೊತ್ತಕ್ಕೂ ಇರುವ ವ್ಯತ್ಯಾಸವನ್ನು ಅಂಕಿಅಂಶ ಸಹಿತವಾಗಿ ದೇವದಾಸ ಶೆಟ್ಟಿ ಸಭೆಯ ಗಮನಸೆಳೆದರು. ಹಣಕಾಸಿನ ವ್ಯವಹಾರವಾಗಿರುವುದರಿಂದ ಸ್ಪಷ್ಟ ಮಾಹಿತಿ ನೀಡಬೇಕು, ಅಲ್ಲಿವರೆಗೆ ಸಭೆ ಮುಂದೂಡುವಂತೆ ಅಗ್ರಹಿಸಿದರು. ಇದಕ್ಕೆ  ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್ ಸಣ್ಣ ಪುಟ್ಟ ವ್ಯತ್ಯಾಸವಿರಬಹುದು ಬೇರೆ, ಬೇರೆ ಶೀಷಿ೯ಕೆಯಲ್ಲಿ ಹಣ ಜಮಾ ಅಗಿರುವುದರಿಂದ ಅಂತಿಮವಾಗಿ ಲೆಕ್ಕ ಒಂದಕ್ಕೊಂದು ತಾಳೆ ಯಾಗುತ್ತಿದೆ ಎಂದು ಉತ್ತರಿಸಿದರು.

ಆಯವ್ಯಯ ಮಂಡನೆಯ ವಿಶೇಷ ಸಭೆಗೆ ಕಾಯ್ದೆಯಂತೆ ಮೂರು ದಿನಗಳ ಮೊದಲು  ಸದಸ್ಯರಿಗೆ ನೊಟೀಸ್ ಜಾರಿಗೊಳಿಸಬೇಕು. ಆದರೆ ಸದಸ್ಯ ಗೋವಿಂದ ಪ್ರಭು ಅವರಿಗೆ 15 ರಂದು ಸಭೆಯ ನೋಟಿಸ್ ತಲುಪಿದೆ. ಈ ಕುರಿತು ಅವರು ಸಭೆಗೆ ಮುನ್ನ ಮುಖ್ಯಾಧಿಕಾರಿ ಅವರನ್ನು ಭೇಟಿ ಮಾಡಿ, ತಮ್ಮ ಆಕ್ಷೇಪವನ್ನು ಸಲ್ಲಿಸಿದ್ದು, ಇದನ್ನು ಸಭೆಯಲ್ಲಿ ದೇವದಾಸ ಶೆಟ್ಟಿ ಪ್ರಸ್ತಾಪಿಸಿದರು

ಟ್ಯೂಬ್ ಲೈಟ್ ತಂದರೆ ಅದಕ್ಕೆ ಬೇಕಾದ ಸಲಕರಣೆಗಳನ್ನು ತರಲು ಪುರಸಭಾ ಸದಸ್ಯರಿಗೆ ತಿಳಿಸಲಾಗುತ್ತಿದೆ. ಇದು ಯಾವ ನೀತಿ ಎಂದು ಸದಸ್ಯ ಮಹಮ್ಮದ್ ಶರೀಫ್ ಅಸಮಾಧಾನ ವ್ಯಕ್ತಪಡಿಸಿದರು.ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ , ಸದಸ್ಯರಾದ ಇಕ್ಬಾಲ್, ಚಂಚಲಾಕ್ಷಿ, ಜಗದೀಶ ಕುಂದರ್, ಗಂಗಾಧರ್ ಪ್ರವೀಣ್, ಜೆಸಿಂತಾ, ಮೊನೀಶ್ ಆಲಿ, ವಸಂತಿ ಚಂದಪ್ಪ, ಸುಗುಣಾ ಕಿಣಿ, ವಾಸು ಪೂಜಾರಿ ಚರ್ಚೆಯಲ್ಲಿ ಭಾಗವಹಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.