ಬಂಟ್ವಾಳ

ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ನಿಯಮಿತ ಶಾಖೆ ಉದ್ಘಾಟನೆ

ಶನಿವಾರ ಬಿ.ಸಿ.ರೋಡು ಕೈಕಂಬದ ವಿಶಾಲ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ನಿಯಮಿತ ಮೂರನೆ ಶಾಖೆಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.

ದೀಪ ಬೆಳಗಿಸಿ ಮಾತನಾಡಿದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಏಷ್ಯಾದಲ್ಲಿಯೇ ವಿದ್ಯುತ್ ಗುತ್ತಿಗೆದಾರರ ಸಂಘವು ದಕ್ಷಿಣ ಜಿಲ್ಲೆಯಲ್ಲಿ ಪ್ರಥಮವಾಗಿ ಸ್ಥಾಪಿಸಲ್ಪಟ್ಟಿದೆ. ಸಣ್ಣ ಸಣ್ಣ ಗುತ್ತಿಗೆದಾರರು ಗಟ್ಟಿಯಾಗಬೇಕು. ಆರ್ಥಿಕರಾಗಿ ಪ್ರಬಲರಾಗಬೇಕು ಎಂದರು. ವಿದ್ಯುತ್‌ನ ಬಗ್ಗೆ ಭಯ ಇದ್ದರೂ ಅದರಲ್ಲೂ ಸೌಹಾರ್ದತೆ ತೋರಿಸುತ್ತಾ ಇರುವುದು ಸಂತೋಷದ ವಿಷಯ. ಭವಿಷ್ಯದಲ್ಲಿ ಈ ಬ್ಯಾಂಕ್‌ಗೆ ಉತ್ತಮ ಅವಕಾಶಗಳಿವೆ ಎಂದು ಠೇವಣಿ ಪತ್ರ ಬಿಡುಗಡೆ ಮಾಡಿ, ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ತಿಳಿಸಿದರು.

ಗಣಕೀಕರಣ ವಿಭಾಗದ ಉದ್ಘಾಟನೆಯನ್ನು ಸೌಂದರ್ಯ ಪ್ಯಾಲೇಸ್‌ನ ಮಾಲಕ ಸೌಂದರ್ಯ ರಮೇಶ್ ಮಾಡಿದರು. ಮುಖ್ಯ ಅತಿಥಿಗಳಾಗಿ ಕೆಥೋಲಿಕ್ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿಯ ಅಧ್ಯಕ್ಷ ಹೆರಾಲ್ಡ್ ಡಿಸೋಜ, ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಜಿ. ಆನಂದ, ಉದ್ಯಮಿ ಅಹಮ್ಮದ್ ಬಾವ, ಬಂಟ್ವಾಳ ವಿಭಾಗೀಯ ಕಾರ್ಯನಿರ್ವಾಹಕ ಅಭಿಯಂತರ ಉಮೇಶ್ಚಂದ್ರ, ಎಂ.ಕೆ ಟವರ್‍ಸ್‌ನ ಮಾಲಕ ಕೆ.ಎಂ. ಮೊದಿನ್ ಮಾತನಾಡಿದರು. ಉಪಾಧ್ಯಕ್ಷ ಮಹಾದೇವ ಶಾಸ್ತ್ರಿ, ಬಿ.ಸಿ.ರೋಡು ಶಾಖಾ ವ್ಯವಸ್ಥಾಪಕ ಜಯರಾಮ್ ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಾಮಚಂದ್ರ ಹೊಳ್ಳ, ಗುತ್ತಿಗೆದಾರರ ಸಂಘದ ಬಂಟ್ವಾಳ ಉಪಸಮಿತಿಯ ಅಧ್ಯಕ್ಷ  ಸುಬ್ರಹ್ಮಣ್ಯ ಭಟ್, ನಿರ್ದೇಶಕರುಗಳಾದ ಶೈಲೇಶ್ ಮಲ್ಯ, ಕುಶಲ ಪೂಜಾರಿ, ಪಿ. ಶಿವಕುಮಾರ್ ಪೈಲೂರ್, ರಾಧಾಕೃಷ್ಣ ಶೆಟ್ಟಿ, ವಸಂತ್ ಕುಮಾರ್ ಕೆದಿಲ, ಸದಾಶಿವ ಬಂಗೇರ, ಲಕ್ಷ್ಮೀನಾರಾಯಣ ಅಡ್ಯಂತಾಯ, ರಮೇಶ್ ಭಂಡಾರಿ, ದಿಲೀಪ್ ಕುಮಾರ್ ಜೈನ್, ಪೂವಪ್ಪ ನಾಯ್ಕ್, ಎಡ್ವರ್ಡ್ ಸಿಕ್ವೇರಾ, ರವಿಪ್ರಸಾದ್ ಕೆ. ಶೆಟ್ಟಿ, ಎಡಬ್ಲ್ಯೂಇ ನಾರಾಯಣ ಭಟ್, ಶಾಖಾ ಸಲಹಾ ಸಮಿತಿಯ ಸದಸ್ಯರಾದ ಸುಬ್ರಹ್ಮಣ್ಯ ರಾವ್, ಶೀನಪ್ಪ ಮೂಲ್ಯ, ಹಾಜಿ ಇಬ್ರಾಹಿಂ ಉಪಸ್ಥಿತರಿದ್ದರು.

ಬಿ.ಸಿ.ರೋಡು ಶಾಖಾ ಸಲಹಾ ಸಮಿತಿಯ ಅಧ್ಯಕ್ಷ ಸದಾಶಿವ ಬಂಗೇರ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪದ್ಮನಾಭ ಮಯ್ಯ ವಂದಿಸಿದರು.

ನಿಶ್ಚಿತಾ ಮತ್ತು ಚೈತ್ರ ಪ್ರಾರ್ಥಿಸಿದರು. ಬಾಲಕೃಷ್ಣ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ