ಕಲ್ಲಡ್ಕ-ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯ ಕುದ್ದುಪದವು ಮರಕ್ಕಿನಿ ಎಂಬಲ್ಲಿ ಗುಡ್ಡಯೊಂದಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ ಪರಿಣಾಮ ಗುಡ್ಡ ಸಂಪೂರ್ಣವಾಗಿ ಹೊತ್ತಿ ಉರಿದು ಬೆಲೆಬಾಳುವ ಮರಗಳು ಗುರುವಾರ ಭಸ್ಮಗೊಂಡವು.
ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ವಿದ್ಯುತ್ ಬೆಂಕಿಯ ಚೂರು ನೆಲಕ್ಕೆ ಉರುಳಿ ಇದರಿಂದ ಬೆಂಕಿ ಪಕ್ಕದಲ್ಲಿರುವ ಗುಡ್ಡಕ್ಕೆ ಆವರಿಸಿದೆ ಸ್ಥಳೀಯರು ಬಕೆಟ್ ಹಾಗೂ ಕೊಡಗಳ ಮೂಲಕ ನೀರು ತಂದು ನಂದಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯರು ಬಂಟ್ವಾಳ, ಪುತ್ತೂರು ಹಾಗೂ ಬೆಳ್ತಂಗಡಿ ತಾಲ್ಲೂಕಿನ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಅಗ್ನಿಶಾಮಕ ದಳ ಸಿಬ್ಬಂದಿ ಬಾರದ ಬಳಿಕ ಸ್ಥಳೀಯರು ಬೆಂಕಿ ನಂದಿಸುವ ಯತ್ನ ಮಾಡಿದರು.
ಬೆಳಿಗ್ಗೆ ೧೨ ಸುಮಾರಿಗೆ ಬೆಂಕಿ ತಗುಲಿದ್ದು, ಮಧ್ಯಾಹ್ನ ಮೂರು ಗಂಟೆಯಾದರೂ ಬೆಂಕಿ ತೀವ್ರತೆ ಕಡಿಮೆಯಾಗಿರಲಿಲ್ಲ. ಘಟನೆಯಿಂದ ಆಕೇಶಿಯಾ ಮೊದಲಾದ ಜಾತಿ ಸೇರಿದ ಮರಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಕೇಪು ಗ್ರಾಮ ಪಂಚಾಯಿತಿ ಸದಸ್ಯ ಕರೀಂ ಕುದ್ದುಪದವು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಅಳಿಕೆಯಲ್ಲಿ ಬೆಂಕಿ: ಅಳಿಕೆ ಗ್ರಾಮದ 5 ಎಕರೆ ಗುಡ್ಡಕ್ಕೆ ಬೆಂಕಿ ತಗುಲಿದೆ. ಬಂಟ್ವಾಳ ಅಗ್ನಿಶಾಮಕದಳದವರು ಬಂದು ನಂದಿಸಿದ್ದಾರೆ. ಈ ಎರಡು ಘಟನೆಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದೆ ಎನ್ನಲಾಗಿದೆ.