ಪೆರಾಜೆ-ನೇರಳಕಟ್ಟೆಯ ಯುವ ಕೇಸರಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ನೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಮಾಣಿ ಯುವಕ ಮಂಡಲ ತಂಡವು ಕೇಸರಿ ಟ್ರೋಫಿ-2017ನ್ನು ಪಡೆದುಕೊಂಡಿತು. ಕಡೇಶ್ವಾಲ್ಯದ ಶ್ರೀ ಲಕ್ಷ್ಮೀ ನರಸಿಂಹ ಗೆಳೆಯರ ಬಳಗ ತಂಡ ದ್ವಿತೀಯ ಹಾಗೂ ಸೇರಾ ಉದಯ ಯುವಕ ಮಂಡಲ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.
ಮಾಣಿ ಯುವಕ ಮಂಡಲ ತಂಡದ ರೈಯಾನ್ ಪಿಂಟೋ ಆಲ್‌ರೌಂಡರ್ ಪ್ರಶಸ್ತಿ ಪಡೆದುಕೊಂಡರೆ, ತಿಲಕ ಉತ್ತಮ ಎತ್ತುಗಾರ, ಹಾಗೂ ಕಡೇಶ್ವಾಲ್ಯ ತಂಡದ ಹರ್ಷಿತ್ ಉತ್ತಮ ಹೊಡೆತಗಾರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಪೆರಾಜೆ ಯುವ ವೇದಿಕೆ ಸಂಚಾಲಕ ರಾಜಾರಾಮ್ ಕಾಡೂರು ಪಂದ್ಯಾಕೂಟವನ್ನು ಉದ್ಘಾಟಿಸಿದರು. ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯ ಲತೀಫ್ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯ ಡಿ. ತನಿಯಪ್ಪ ಗೌಡ, ಡಾ. ವೈ. ಗಣರಾಜ್ ಎಲ್ಕಣ, ನೇರಳಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ವೆಂಕಪ್ಪ ರೈ ಕುರ್ಲೆತ್ತಿಮಾರು, ನೇರಳಕಟ್ಟೆ ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ಪೂಜಾರಿ, ನೇರಳಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ವಾಮನ ಕುಲಾಲ್, ಗಣೇಶನಗರ ಯಂಗ್ ಚಾಲೆಂಜರ್‍ಸ್ ಕಾರ್ಯದರ್ಶಿ ಮೋಹನ್ ಜೆ.ಎಂ., ಮೋಹನ್ ಕುಲಾಲ್ ಪೆರಾಜೆ, ಮಾಣಿ ಗ್ರಾ.ಪಂ. ಸದಸ್ಯ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ನಾಕ್ ಬಿಎಸ್‌ಎನ್‌ಎಲ್, ದಲಿತ ಸೇವಾ ಸಮಿತಿ ಜಿಲ್ಲಾ ಸಂಚಾಲಕ ಗೋಪಾಲ ಮೊದಲಾದವರು ಭಾಗವಹಿಸಿದ್ದರು.
ಫ್ರೆಂಡ್ಸ್ ಪದಾಕಾರಿಗಳಾದ ದಿನೇಶ್, ದೀಪಕ್, ಪ್ರಶಾಂತ, ಮಹೇಶ್, ಅಜಯ್, ಎಂ. ದೀಪಕ್, ನಾಗರಾಜ್, ಶರತ್, ಸುಜಯ್, ಫಝಲ್, ಮಂಜುನಾಥ, ಶಶಿಧರ, ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.
ಚಂದ್ರಶೇಖರ್ ಪೆರಾಜೆ ಹಾಗೂ ನಾಗಪ್ಪ ಬೊಳ್ಳಾಯಿ ತೀರ್ಪುಗಾರರಾಗಿ ಸಹಕರಿಸಿದರು. ಯುವ ಕೇಸರಿ ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ವಂದಿಸಿದರು. ಶಾಕಿರ್ ಕೆಂಪುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.