ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಿಗುವ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಎಲ್ಲ ರೀತಿಯಿಂದಲೂ ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸುವ ಬಗ್ಗೆ ಚಿಂತಿಸಬೇಕು ಎಂದು ಎಸ್.ವಿ.ಎಸ್.ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ| ಮಂಜುನಾಥ ಉಡುಪ ಹೇಳಿದರು.
ಎಸ್.ವಿ.ಎಸ್.ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗಣಿತ, ಕನ್ನಡ ಹಾಗೂ ಸಂಸ್ಕೃತ ಪ್ರತಿಭಾ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಳಿಗೆ ಶುಭ ಹಾರೈಸಿದರು.
ಕರ್ನಾಟಕ ಅಕಾಡೆಮಿ ಆಫ್ ಮ್ಯಾಥಮ್ಯಾಟಿಕ್ಸ್ ನಡೆಸಿದ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಮೆಲ್‌ರಾಯ್ ಡೆ’ಸಾ ಹಾಗೂ ಕೀರ್ತೇಶ್ ರಾಷ್ಟ್ರಮಟ್ಟದಲ್ಲಿ, ಶಾನ್ ಲಿಂಟನ್ ಮಿರಾಂಡ, ವಿಜಯ ಎಸ್.ರಾವ್, ಮಿಲ್ಟನ್ ಪಿಂಟೋ ರಾಜ್ಯ ಮಟ್ಟದಲ್ಲಿ, ಭರತ್ ರಾಜ್, ನಯನ್ ತುಳುಪುಳೆ ಜಿಲ್ಲಾ ಮಟ್ಟದಲ್ಲಿ, ಸುಜೇತ್ ಲಸ್ರಾದೊ, ಶಶಾಂತ್ ಬಿ. ತಾಲೂಕು ಮಟ್ಟದಲ್ಲಿ, ಯೋಗೀಶ್ ಹಾಗೂ ಗೌರಿಲಕ್ಷ್ಮಿ ಜಿ.ಪುರುಷ ಕಾಲೇಜು ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದು ಅವರನ್ನು ಪದಕ ಹಾಗೂ ಪ್ರಶಸ್ತಿ ಪತ್ರಗಳೊಂದಿಗೆ ಅಭಿನಂದಿಸಲಾಯಿತು.
ಸಿರಿಗನ್ನಡ ಪ್ರಕಾಶನ ನಡೆಸಿದ ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಮೇಘನಾ ಪೈ , ಸೀಮಾ ಜೋಸ್ಲಿನ್ ರಾಜ್ಯ ಮಟ್ಟದಲ್ಲಿ ಹಾಗೂ ಅನನ್ಯ ಜಿ. ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರನ್ನೂ ಅಭಿನಂದಿಸಲಾಯಿತು. ಭಾರತ ಸಂಸ್ಕೃತ ಪ್ರತಿಷ್ಠಾನ ನಡೆಸಿದ ಸಂಸ್ಕೃತ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದರು.
ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ಚೇತನ್ ಮುಂಡಾಜೆ ಸ್ವಾಗತಿಸಿ, ಉಪನ್ಯಾಸಕಿ ಕವಿತಾ ಯಾದವ್ ವಂದಿಸಿದರು .ಉಪನ್ಯಾಸಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು