ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯಿತಿ ಸ್ಥಾನಕ್ಕೆ ಫೆ.12ರದು ನಡೆದ ಉಪ ಚುನಾವಣೆಯ ಮತ ಎಣಿಕೆ ಬುಧವಾರ ಬಿ.ಸಿ.ರೋಡಿನ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಾಂತಾ ಪ್ರಮೋದ್ ರಾಜ್ ವಿಜಯಿಯಾಗಿದ್ದಾರೆ.
ಅಮ್ಮುಂಜೆ 1 ಕ್ಷೇತ್ರಕ್ಕೆ ಸದಸ್ಯೆ ಶರ್ಮಿಳಾ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಶಾಂತಾ 433 ಮತಗಳನ್ನು ಗಳಿಸಿದರೆ, ನಳಿನಾಕ್ಷಿ 332 ಮತ ಗಳಿಸಿದ್ದಾರೆ. ಎರಡು ಮತಗಟ್ಟೆಗಳಲ್ಲಿ ಚುನಾವಣೆ ನಡೆದಿತ್ತು.
ಚುನಾವಣಾಧಿಕಾರಿ ಎಸ್.ಕೆ.ಸರಿಕಾರ ಮಾರ್ಗದರ್ಶನದಲ್ಲಿ ಚುನಾವಣಾ ವಿಭಾಗ ಉಪತಹಸೀಲ್ದಾರ್ ಪರಮೇಶ್ವರ ನಾಯ್ಕ್ ಮತ್ತು ಸಿಬ್ಬಂದಿ ಮತ ಎಣಿಕೆಯಲ್ಲಿ ಭಾಗವಹಿಸಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…