ಶಿಥಿಲಗೊಂಡಿದ್ದ ಅಮ್ಟಾಡಿ ಗ್ರಾಮದ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ, ದೂಮಾವತಿ ಬಂಟ ಹಾಗೂ ಪರಿವಾರ ದೈವಗಳ ನೂತನವಾಗಿ ಪುನರ್‌ನಿರ್ಮಾಣಗೊಂಡಿರುವ ದೈವಸ್ಥಾನದ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾರ್ಚ್ 1ರಿಂದ 5ರ ತನಕ ನಡೆಯಲಿದೆ ಹಾಗೂ ಕಲಾಯಿ ಶ್ರೀ ಮಹಮ್ಮಾಯಿ, ಅಶ್ವಥನಾರಾಯಣ ನಾಗದೇವರು ಮಾರಿಯಮ್ಮ ಪರಿವಾರ ದೈವಗಳ ದೇವಸ್ಥಾನ ಅಮ್ಟಾಡಿಯಲ್ಲಿ ಕಲಾಯಿ ಮಹಮ್ಮಾಯಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆಬ್ರವರಿ ೨೭ರಿಂದ ಮಾರ್ಚ್ ೧ರವರೆಗೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ರವಿಶಂಕರ್ ಶೆಟ್ಟಿ ಬಡಾಜೆ ತಿಳಿಸಿದರು.
ಮಂಗ್ಲಿಮಾರ್ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಹಿಂದೆ ಇದ್ದ ದೈವಸ್ಥಾನವನ್ನು ಕೆಡವಿ ಈಗ ಅಮ್ಟಾಡಿ ಗ್ರಾಮಸ್ಥರಿಗೆ ಶಾಶ್ವತವಾದ ದೈವಸ್ಥಾನ ನಿರ್ಮಾಣವಾಗಿದೆ. ಎಲ್ಲಾ ದರ್ಮದವರ ಸಹಕಾರದಿಂದ ಈ ದೈವಸ್ಥಾನ ನಿರ್ಮಾಣವಾಗಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಬ್ರಹ್ಮಲಶೋತ್ಸವ ನಡೆಯಲಿದೆ ಎಂದು ತಿಳಿಸಿದರು.
ವೈಭವದ ಹೊರೆಕಾಣಿಕೆ ಮೆರವಣಿಗೆ : ಹೊರೆಕಾಣಿಕೆ ಮೆರವಣಿಗೆಯು ಮಾರ್ಚ್ 2ರಂದು ಮಧ್ಯಾಹ್ನ ಗಂಟೆ 2ಕ್ಕೆ ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಹೊರಟು ಕೈಕಂಬ ಪೊಳಲಿ ದ್ವಾರದ ಮೂಲಕ ಮಂಗ್ಲಿಮಾರ್ ದೈವಸ್ಥಾನಕ್ಕೆ ಬರಲಿರುವುದು ಹಾಗೂ ಮಾರ್ಚ್ ೪ರಂದು ಬೆಳಿಗ್ಗೆ 10ಕ್ಕೆ ಬಡಾಜೆಗುತ್ತುವಿನಿಂದ ದೈವಗಳ ಭಂಡಾರವು ಮಂಗ್ಲಿಮಾರ್ ದೈವಸ್ಥಾನಕ್ಕೆ ಆಗಮಿಸುವುದು ಹಾಗೂ ಅದೇ ದಿನ ಸಂಜೆ 4ಕ್ಕೆ ನಲ್ಕೆಮಾರ್ ದ್ವಾರದಿಂದ ಪೂಜ್ಯಶ್ರೀ ಡಾ. ವೀರೇಂದ್ರ ಹೆಗ್ಗಡೆಯವರು ಕೀಲುಕುದುರೆ, ಬ್ಯಾಂಡ್ ವಾದ್ಯ ಹಾಗೂ ಪೂರ್ಣಕುಂಭದ ಸ್ವಾಗತದೊಂದಿಗೆ ಮಂಗ್ಲಿಮಾರ್‌ಗೆ ಮೆರವಣಿಗೆ ಮೂಲಕ ಆಗಮಿಸಿ ಭಂಡಾರದ ಮನೆಯ ದೀಪ ಪ್ರಜ್ವಲನ ಮಾಡಿ ಆಶೀರ್ವಚನ ನೀಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಡಾಜೆ ಗುತ್ತಿನವರು, ಎಲೆದಾರ ಬಾವದವರು, ತಡ್ಯಾಲ ಗುತ್ತಿನವರು, ಕೈಯೋಳಿಮಾರ್ ಗುತ್ತಿನವರು, ಉಸ್ತುವಾರಿ ಸಮಿತಿಯ ಪದಾಧಿಕಾರಿಗಳಾದ ಭುವನೇಶ್ ಪಚ್ಚಿನಡ್ಕ, ನರಸಿಂಹ ಹೊಳ್ಳ, ರಾಮಚಂದ್ರ ಕಾಯರ್‌ಮಾರ್, ಸಚ್ಚಿದಾನಂದ ಶೆಟ್ಟಿ ಬಡಾಜೆ, ಪುಷ್ಪರಾಜ್ ಶೆಟ್ಟಿ ಬಡಾಜೆ, ಪ್ರಶಾಂತ್ ಬಡಾಜೆ, ಪಿ. ಕೇಶವ ನಾಕ್, ಬಸಂತ ಕುಮರ್ ಕಾಯರ್‌ಮಾರ್, ಉಮೇಶ್ ಶೆಟ್ಟಿ ಬಟ್ಟತ್ತೋಡಿ, ವಿಶ್ವನಾಥ ಕಲಾಯಿ, ರಾಜಾರಾಮ ಶೆಟ್ಟಿ ಬಡಾಜೆ, ಹರಿಶ್ಚಂದ್ರ ಶೆಟ್ಟಿ ಅಜೆಕಲ, ಮೋಹನ್ ಶೆಟ್ಟಿ ಬಡಾಜೆ, ನೇತ್ರಾನಂದ ಶೆಟ್ಟಿ ಬಟ್ಟತ್ತೋಡಿ, ಕೃಷ್ಣಪ್ಪ ಕಲಾಯಿ, ಪ್ರಭಾಕರ ಆಳ್ವ ಬಡಾಜೆ, ಜಯಾನಂದ ಕೋಟ್ಯಾನ್, ಚಂದ್ರಶೇಖರ ಶೆಟ್ಟಿ ಎಂರ್ಬುಡೆ, ಲಕ್ಷ್ಮಣ ಶೆಟ್ಟಿ ಬಟ್ಟತ್ತೋಡಿ, ಜಗದೀಶ್ ಕುಂದರ್ ಹಾಗೂ ಮಹಿಳಾ ಸಮಿತಿಯ ರೇವತಿ ಉಪಸ್ಥಿತರಿದ್ದರು.ತಾರನಾಥ ಕಾಯರ್‌ಮಾರ್ ಸ್ವಾಗತಿಸಿದರು.