ಕಲ್ಲಡ್ಕ

ಸುಪ್ತ ಪ್ರತಿಭೆ ಅನಾವರಣಕ್ಕೆ ಹೆತ್ತವರು, ಶಿಕ್ಷಕರ ಸಹಕಾರ ಅಗತ್ಯ

ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೆತ್ತವರು ಮತ್ತು ಶಿಕ್ಷಕರು ಹುಡುಕಿ ತೆಗೆದು ಪರಿಚಯಿಸಿದರೆ, ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ ಹೇಳಿದರು.

ಮಜಿ ವೀರಕಂಭ ಶಾಲೆಯಲ್ಲಿ ಕಲ್ಲಡ್ಕ ಮತ್ತು ಬಾಳ್ತಿಲದ ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬಾಳ್ತಿಲ ವಲಯದ ಸ್ಪಷ್ಟ ಓದು, ಶುದ್ಧ ಬರಹ ಪಡೇ ಭಾರತ್, ಬಡೇ ಭಾರತ್ ನೆಲೆಯಲ್ಲಿ ಕಲಿಕೋತ್ಸವ ಹಾಗೂ ಶಾಲಾ ನವೀಕರಣಗೊಂಡ ಸಭಾಂಗಣ ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು

ಚಿನ್ನವು ಪುಟಕ್ಕಿಟ್ಟಾಗ ಅಪ್ಪಟ ಬಂಗಾರವಾಗುವಂತೆ ವಿದ್ಯಾರ್ಥಿಗಳ ಪ್ರತಿಭೆಗಳು ಹೊರ ಹೊಮ್ಮಬೇಕಾದರೆ ಶಿಕ್ಷಣ ಕಾರ್ಯಕ್ರಮಗಳು ನೆರವೇರಿದಾಗ ಅವರ ಸಾಮರ್ಥ್ಯಗಳಿಗೆ ಹುರುಪು ತುಂಬುವ ವೇದಿಕೆಯಾಗುತ್ತವೆ, ಈ ನಿಟ್ಟಿನಲ್ಲಿ ಕಲಿಕೋತ್ಸವವು ನೆರವಾಗಿದೆ, ಮಕ್ಕಳ ಭವಿಷ್ಯದ ಕನಸುಗಳನ್ನು ನನಸು ಮಾಡುವಲ್ಲಿ ಹೆತ್ತವರ ಪ್ರೋತ್ಸಾಹ ಮುಖ್ಯವಾಗಿದೆ ಎಂದು ಮಂಜುಳಾ ಮಾವೆ ಹೇಳಿದರು.

ತಾ.ಪಂ.ಸದಸ್ಯೆ ಗೀತಾ ಚಂದ್ರಶೇಖರ್‌ ಮಾತನಾಡಿ, ಶಾಲಾ ಪರಿಸರವು ವಿದ್ಯಾರ್ಥಿಗಳ ಬದುಕಿನ ಮೇಲೆ ತೀವ್ರವಾದ ಪ್ರಭಾವವನ್ನು ಬೀರುತ್ತದೆ, ಮಗು ತನ್ನ ಕಲಿಕೆಯ ಸಂದರ್ಭ ಕೇವಲ ಪಾಠವಲ್ಲದೇ ಪಠ್ಯೇತರ ಚಟುವಾಟಿಕೆಗಳ ಮೂಲಕ ಕಲಿಕೆಯನ್ನು ಪಡೆದಾಗ ಹೆಚ್ಚು ಅರ್ಥ ಪೂರ್ಣವಾಗುತ್ತದೆ, ಇದಕ್ಕೆ ಹೆತ್ತವರು, ಶಿಕ್ಷಕರು, ಸಮಾಜವು ಪ್ರೇರಣೆಯಾಗಬೇಕೆಂದು ಹೇಳಿದರು.

ಕಲ್ಲಡ್ಕ ವಲಯದ ಶಿಕ್ಷಣ ಸಂಯೋಜಕಿ ಪುಷ್ಪಾ ಹೊಸ ಶಿಕ್ಷಣ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಪೂರಕವಾಗಿವೆ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆ ನೀಧುತ್ತವೆ. ಮೌಲ್ಯಮಾಪನಗಳು ಪಾರದರ್ಶಕತೆಯಿಂದ ಕೂಡಿದ್ದು ಮಕ್ಕಳಲ್ಲಿ ಹುಮ್ಮಸ್ಸು ಹೆಚ್ಚಿಸುವಂತಾಗಲಿ ಎಂದು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ನಿಶಾಂತ್ ರೈ, ಸದಸ್ಯರಾದ ರಾಮಚಂದ್ರ ಪ್ರಭು, ಜನಾರ್ಧನ ನಾರುಕೋಡಿ, ಜಯಂತಿ, ಪದ್ಮಾವತಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸಂಜೀವ ಮೂಲ್ಯ, ನಿಕಟ ಪೂರ್ವ ಸ.ಸಂ.ವ್ಯಕ್ತಿ ಉದಯಕುಮಾರ್, ಶಿ.ಸಂ.ಪ್ರತಿನಿಧಿ ಸಂತೋಷ್ ಹಾಗೂ ಎರಡೂ ಕ್ಲಸ್ಟರ್‌ನ 25 ಶಾಲೆಗಳ ಶಿಕ್ಷಕರು ಹಾಗೂ ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದರು.  ಮುಖ್ಯ ಶಿಕ್ಷಕರಾದ ನಾರಾಯಣ ಪೂಜಾರಿ ಸ್ವಾಗತಿಸಿ ಸ.ಸಂ.ವ್ಯಕ್ತಿ ಆರತಿ ಧನ್ಯವಾದವಿತ್ತರು, ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ಶಕುಂತಲಾ, ಸಿಸಿಲಿಯಾ, ಜ್ಯೋತಿ, ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಸಹಕರಿಸಿದರು.

 

 

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಯಕ್ಷಗಾನದ ದಶಾವತಾರಿ ಸೂರಿಕುಮೇರು ಗೋವಿಂದ ಭಟ್ ಇನ್ನಿಲ್ಲ

ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…

23 hours ago