ಬಂಟ್ವಾಳ

108 ಮುನಿಶ್ರೀ ಪ್ರಸಂಗಸಾಗರ ಮಹಾರಾಜ್ ಪುರಪ್ರವೇಶ

ಕ್ರಾಂತಿಕಾರಿ ಸಂತ ಪೂಜ್ಯ 108 ಮುನಿಶ್ರೀ ಪ್ರಸಂಗ ಸಾಗರ ಮಹಾರಾಜರು ಧರ್ಮಪ್ರಚಾರಕ್ಕೋಸ್ಕರ ಶುಕ್ರವಾರ ಸಂಜೆ ಬಂಟ್ವಾಳ ಪುರಪ್ರವೇಶ ಮಾಡಿದರು.

ಶ್ರವಣಬೆಳಗೊಳದಿಂದ ಹೊರಟ ಅವರು ವೇಣೂರು, ಅಜ್ಜಿಬೆಟ್ಟು ಬಸದಿ, ಪಂಜಿಕಲ್ಲು ಮನೆ ಮತ್ತಿತರೆಡೆ ತೆರಳಿ ಬಳಿಕ ಬಂಟ್ವಾಳ ಪೇಟೆಯಲ್ಲಿರುವ ಜೈನ ಬಸದಿಗೆ ಶುಕ್ರವಾರ ಸಂಜೆ ಪುರಪ್ರವೇಶ ಮಾಡಿದರು. ಈ ಸಂದರ್ಭ ಸುದರ್ಶನ ಜೈನ್, ಸುಭಾಶ್ಚಂದ್ರ ಜೈನ್, ನಿರಂಜನ ಇಂದ್ರ ಪಾಣೆಮಂಗಳೂರು, ಅರ್ಕಕೀರ್ತಿ ಇಂದ್ರ ಸಿದ್ಧಕಟ್ಟೆ, ಯುವರಾಜ ಆಳ್ವ ವಾಮದಪದವು, ವೃಷಭರಾಜ ಇಂದ್ರ ಅಜ್ಜಿಬೆಟ್ಟು, ಆದಿರಾಜ ಜೈನ್ ವಗ್ಗ, ಭರತ್ ರಾಜ್ ಜೈನ್ ಪಾಪುದಡ್ಕ, ಪ್ರವೀಣ್ ಜೈನ್ ವೇಣೂರು, ಸುದೀಪ್ ಸಿದ್ಧಕಟ್ಟೆ, ಅರುಣ್ ಕುಮಾರ್ ಇಂದ್ರ ಅಜ್ಜಿಬೆಟ್ಟು, ಹರ್ಷರಾಜ್ ಜೈನ್,  ಅನಿಲ್ ವರ್ಮ ಸಹೋದರರು ಅಲ್ಲಿಪಾದೆ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಜೈನ ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು. ಶನಿವಾರ ಪಾಣೆಮಂಗಳೂರು ಪ್ರವೇಶ, ಭಾನುವಾರ ಪಾಣೆಮಂಗಳೂರು ಬಸದಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ೧೯ಕ್ಕೆ ಮಂಗಳೂರು ಪುರಪ್ರವೇಶ ಮಾಡುವರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

2 hours ago