bantwalnews.com report
ವಿಟ್ಲ – ಪುತ್ತೂರು ರಸ್ತೆಯ ಕಲ್ಲಕಟ್ಟ ಎಂಬಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದ ಅಪಘಾತವೊಂದರಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಕರೆಂಕಿ ಎಂಬಲ್ಲಿನ ನಿವಾಸಿ ಪುಷ್ಪರಾಜ್ (20) ಮೃತಪಟ್ಟವರು.
ಸಮೀಪದಲ್ಲಿ ಬೀಗರ ಔತಣ ಮುಗಿಸಿ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.ಪುಷ್ಪರಾಜ್ ಚಲಾಯಿಸುತ್ತಿದ್ದ ಬೈಕ್ ಕಲ್ಲಕಟ್ಟ ಸಮೀಪ ಮನೆಯೊಂದಕ್ಕೆ ನುಗ್ಗಿತು. ಈ ಸಂದರ್ಭ ಕಿಟಕಿಯ ಮೇಲಿನ ಸ್ಲ್ಯಾಬ್ ಗೆ ಅವರ ತಲೆ ಬಡಿದು ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಅಸು ನೀಗಿದರು. ವಿಟ್ಲ ಠಾಣಾ ಎಸ್.ಐ. ನಾಗರಾಜ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…