www.bantwalnews.com report
ಭಾನುವಾರ ಸಂಜೆ ಗೂಡಿನಬಳಿ ರೇಚಕ ಸ್ಥಾವರದಲ್ಲಿ ಶುದ್ಧೀಕರಿಸಿದ ಕುಡಿಯುವ ನೀರು ತುಂಬಿ ಸ್ಥಾವರದ ಸುತ್ತಲೂ ತೂತಿನ ಮೂಲಕ ಧಾರಾಕಾರವಾಗಿ ಹೊರ ಚೆಲ್ಲುತ್ತಿದ್ದ ದೃಶ್ಯಗಳು ಕಂಡುಬಂದವು.
ಈ ಸ್ಥಾವರದ ಪಕ್ಕದಲ್ಲೇ ಇರುವ ರೋಟರಿ ಕ್ಲಬ್‌ಗೆ ರೋಟರಿ ಗವರ್ನರ್ ಡಾ. ಆರ್.ಎಸ್.ನಾಗಾರ್ಜುನ ಅವರ ಭೇಟಿ ಕಾರ್ಯಕ್ರಮ ನಡೆದಿದ್ದು ಸ್ಥಳೀಯ ಸುದ್ದಿಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ತೆರಳಿದಾಗ ಸ್ಥಾವರದಿಂದ ನೀರು ಹೊರ ಚೆಲ್ಲುತ್ತಿರುವುದು ಕಂಡು ಬಂತು. ಇದು ಸಾಮಾನ್ಯ ದೃಶ್ಯ ಎಂದು ಸ್ಥಳೀಯರು ಸುದ್ದಿಗಾರರಿಗೆ ತಿಳಿಸಿದರು.
ಕೆಲವು ಹೊತ್ತಿನ ಬಳಿಕ ಇಲ್ಲಿನ ಸಿಬ್ಬಂದಿಯೊಬ್ಬರು ಧಾವಿಸಿ ಬಂದು ಪಂಪ್‌ನ ಸ್ವಿಚ್ ಆಫ್ ಮಾಡಿದಾಗ ಸೋರಿಕೆ ನಿಂತಿತು.
ಬಿ.ಸಿ.ರೋಡ್ ಭಾಗಕ್ಕೆ ನೀರು ಪೂರೈಕೆಯ ಗೇಟ್‌ವಾಲ್ ತೆರೆಯಲೆಂದು ತಾನು ತೆರಳಿದ್ದು ಆ ಸಂದರ್ಭ ಇಲ್ಲಿ ವಿದ್ಯುತ್ ಕಡಿತಗೊಂಡಿತ್ತು. ವಿದ್ಯುತ್ ಬಂದು ನೀರು ತುಂಬಿ ಹೊರ ಚೆಲ್ಲಿದೆ. ಎರಡನೆ ಹಂತದ ಕಾಮಗಾರಿಯ ಪೈಪ್ ಅಳವಡಿಕೆಯ ಸಂದರ್ಭ ಸ್ಥಾವರದ ಅಲ್ಲಲ್ಲಿ ತೂತುಗಳಾಗಿವೆ. ಇದರಿಂದಾಗಿ ನೀರು ಹೊರ ಚೆಲ್ಲುತ್ತಿವೆ ಎಂದರು.