ಬಂಟ್ವಾಳ

ಕನ್ನಡ, ಆಂಗ್ಲ ಭಾಷೆಗಳು ವೈರಿಗಳಲ್ಲ: ಪ್ರೊ. ವಿವೇಕ ರೈ

ಕನ್ನಡ ಹಾಗೂ ಆಂಗ್ಲಭಾಷೆಗಳು ವೈರಿಗಳಲ್ಲ. ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆಯನ್ನು ಕನ್ನಡಕ್ಕೆ ಅನುವಾದ ಮಾಡುವುದು ಒಂದು ಕಲೆಗಾರಿಕೆಯಾಗಿದೆ  ಎಂದು ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಹೇಳಿದರು.

ಬಿ.ಸಿ.ರೋಡಿಗೆ ಸಮೀಪದ ಕಾಮಾಜೆಯಲ್ಲಿರುವ ಬಂಟ್ವಾಳ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಆಂತರಿಕ ಗುಣಮಟ್ಟ ಭರವಸೆ ಕೋಶದ ಆಶ್ರಯದಲ್ಲಿ ಗೋಯಿಂಗ್ ಬಿಯಾಂಡ್ ಕರಿಕುಲಮ್ ಅಪೋರ್ಚುನಿಟೀಸ್ ಆಂಡ್ ಛಾಲೆಂಜಸ್ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಮಾಧ್ಯಮಗಳಲ್ಲಿ ಅನೇಕ ನೆಲೆಗಳಿದ್ದು ಪ್ರಸ್ತುತ ದಿನಗಳಲ್ಲಿ ಆನ್‌ಲೈನ್ ಮಾಧ್ಯಮಗಳು ಜನಪ್ರಿಯವಾಗುತ್ತಿದ್ದು ಜನರ ಜ್ಞಾನದ ಅಭಿವೃದ್ದಿಗೆ ಬೇಕಾದ ಮಾಹಿತಿಗಳು ಇಲ್ಲಿ ಸಿಗುತ್ತಿದೆ ಎಂದ ಅವರು ಕಂಪ್ಯೂಟರ್ ಕೇವಲ ಜ್ಞಾನವಲ್ಲ. ಅದೊಂದು ತಂತ್ರಜ್ಞಾನ ಎಂದು ಬಣ್ಣಿಸಿದರು.

ಒಂದು ವಿಷಯದ ವಿವಿಧ ನಿಲುವುಗಳನ್ನು ತಿಳಿದುಕೊಳ್ಳಲು ಸಂವಾದ, ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸ ಬೇಕು, ಸರಳವಾದ ವಿಚಾರಗಳನ್ನು  ತಿಳಿದುಕೊಂಡು ವಿಧ್ಯಾರ್ಥಿಗಳು ತಮ್ಮ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರ ಸುತ್ತಾಡುವ ಮೂಲಕ ಕೇವಲ ಆರ್ಥಿಕ ಮಾತ್ರವಲ್ಲ ಭಾರತದ ಚಿತ್ರಣವನ್ನೇ ಬದಲಾಯಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನೋಟ್ ಅಮಾನ್ಯದ ಕುರಿತು ಪರ ವಿರೋಧ ಚರ್ಚೆಯಾಗಿ ಕೆಲವರಿಗೆ ಇದರಿಂದ ತೊಂದರೆಯಾದರೂ  ಭವಿಷ್ಯದ ಆರ್ಥಿಕತೆ ದೃಷ್ಟಿಯಿಂದ ಇದು ಉತ್ತಮ ಕಾರ್ಯ ಎಂದರು.

ಕಾಲೇಜು ಪ್ರಾಂಶುಪಾಲ ಡಾ.ಅಜಕ್ಕಳ ಗಿರೀಶ ಭಟ್, ಕಾರ್ಯಕ್ರಮ ಸಂಯೋಜಕಿ ಪ್ರೊ. ವೇದಶ್ರೀ ನಿಡ್ಯ, ಸಂಘಟನಾ ಸಮಿತಿ ಸದಸ್ಯ ಪ್ರೊ.ಹೈದರ್ ಆಲಿ, ವಿದ್ಯಾರ್ಥಿ ನಾಯಕರಾದ ಪ್ರತಾಪ್, ಚಂದನ ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ