ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಪತನವಾಗಲು ಅದು ಕುಂಬಾರ ಮಾಡಿದ ಮಡಿಕೆನಾ ಎಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕುಲಾಲ, ಕುಂಬಾರ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದ್ದು ಕುಂಬಾರ ಸಮುದಾಯದ ಕ್ಷಮೆ ಕೇಳುವಂತೆ ಆಗ್ರಹಿಸಿದೆ.
ಸರಕಾರದ ಮಂತ್ರಿಯಾಗಿದ್ದುಕೊಂಡು ಜವಬ್ದಾರಿ ಸ್ಥಾನದಲ್ಲಿರುವ ಡಿ.ಕೆ. ಶಿವಕುಮಾರ್ ಅವರು ಇಂತಹ ಮಾತನ್ನು ಆಡಬಾರದಿತ್ತು. ಇದು ಅವರು ಎರಡನೇ ಬಾರಿ ಕುಂಬಾರ ಜನಾಂಗಕ್ಕೆ ಮಾಡಿದ ಅವಮಾನ ಎಂದು ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕಾರ್ಯಾಧ್ಯಕ್ಷ ಡಾ. ಎಂ.ಅಣ್ಣಯ್ಯ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಖಂಡನಾ ಹೇಳಿಕೆಯನ್ನು ಜಿಲ್ಲಾಕಾರಿಗಳ ಮೂಲಕ ಸರಕಾರಕ್ಕೆ ತಲುಪಿಸಲು ಎಲ್ಲಾ ಕರಾವಳಿ, ಕುಲಾಲ ಕುಂಬಾರ ಯುವ ವೇದಿಕೆ ಸಂಘಟನೆಗಳು ನಿರ್ಧರಿಸಿವೆ.