ತುಂಬೆ ಡ್ಯಾಂ ಸಂತ್ರಸ್ತ ರೈತರಿಗೆ ನ್ಯಾಯೋಚಿತ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಜಿಲ್ಲೆಯ ರೈತರು ಸೂಕ್ತ ಪರಿಹಾರ ನೀಡಿದರೆ ಜಮೀನು ಬಿಟ್ಟುಕೊಡಲು ಬದ್ದರಿದ್ದಾರೆ ಎಂದು ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಆಗ್ರಹಿಸಿದರು.
ಮೆಲ್ಕಾರ್ ಬಿರ್ವ ಸಭಾಂಗಣದಲ್ಲಿ ನಡೆದ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ರೂಪೀಕರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸ್ತುತ ವರ್ಷ ತುಂಬೆ ನೂತನ ಡ್ಯಾಂನಲ್ಲಿ 5 ಮೀಟರ್ ನೀರು ಸಂಗ್ರಹಿಸಲಾಗಿದ್ದು, ಮುಳುಗಡೆ ರೈತರಿಗೆ ಪರಿಹಾರ ನೀಡಲು ೭ ಕೋಟಿ ರೂಪಾಯಿ ಬಿಡುಗಡೆಗೆ ಸರಕಾರ ಆದೇಶ ನೀಡಿದೆ ಎಂದರು. ಸಭೆಯಲ್ಲಿ ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯ ಲೋಲಾಕ್ಷ, ಮಾಜಿ ಸದಸ್ಯ ಹಾಜಿ ಪಿ. ಮುಹಮ್ಮದ್ ರಫೀಕ್, ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಎಪಿಎಂಸಿ ಸದಸ್ಯರಾದ ಕೆ ಪದ್ಮನಾಭ ರೈ, ದಿವಾಮಕರ ಪಂಬದಬೆಟ್ಟು, ಸಜಿಪಮುನ್ನೂರು ಗ್ರಾ ಪಂ ಅಧ್ಯಕ್ಷ ಮುಹಮ್ಮದ್ ಶರೀಫ್ ನಂದಾವರ, ಸದಸ್ಯರಾದ ಯೂಸುಫ್ ಕರಂದಾಡಿ, ಕಬೀರ್ ಗಡಿಯಾರ, ಮಾಜಿ ಸದಸ್ಯ ಪರಮೇಶ್ವರ, ಕಳ್ಳಿಗೆ ಗ್ರಾ ಪಂ ಸದಸ್ಯ ಮಧುಸೂಧನ್ ಶೆಣೈ, ಕಿಸಾನ್ ಕೇತ್ ಕಾಂಗ್ರೆಸ್ ವಲಯ ಸಮಿತಿ ಸದಸ್ಯ ಮನೋಜ್ ಆಳ್ವ ಮೊದಲಾದವರು ಭಾಗವಹಿಸಿದ್ದರು. ಪರಿಹಾರ ಸಮಿತಿ ಅಧ್ಯಕ್ಷರಾಗಿ ಯೂಸುಫ್ ಕರಂದಾಡಿ
ಇದೇ ವೇಳೆ ತುಂಬೆ ಡ್ಯಾಂ ಮುಳುಗಡೆ ಸಂತ್ರಸ್ತರ ಪರಿಹಾರ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಯೂಸುಫ್ ಕರಂದಾಡಿ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಉಪಾಧ್ಯಕ್ಷರುಗಳಾಗಿ ಎಂ ಪರಮೇಶ್ವರ, ದಿವಾಕರ ಪಂಬದಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಪಿ ರಾಮಕೃಷ್ಣ ಆಳ್ವ, ಜೊತೆ ಕಾರ್ಯದರ್ಶಿಯಾಗಿ ಕೆ ಎಂ ಅಬ್ದುಲ್ ರಹಿಮಾನ್, ಪತ್ರಿಕಾ ಕಾರ್ಯದರ್ಶಿಯಾಗಿ ಅಹ್ಮದ್ ಕಬೀರ್, ಕೋಶಾಕಾರಿಯಾಗಿ ರಾಜಾ ಬಂಟ್ವಾಳ ಅವರನ್ನು ಆರಿಸಲಾಯಿತು. ಸದಸ್ಯರಾಗಿ ಬಾಲಕೃಷ್ಣ ಕಲ್ಯಾರು, ದಿನೇಶ್ ರೈ, ಮನೋಹರ ಕುಡಿಕೆಲ್ಲಯಾಕೋಡಿ, ರಾಧಾಕೃಷ್ಣ ಪೆರಿಯೋಡಿಬೀಡು, ಸುರೇಶ ಗಟ್ಟಿ ಅರಮನೆಹಿತ್ಲು, ಪ್ರಕಾಶ ಆಚಾರ್ಯ ನಂದಾವರ, ಚಿತ್ರಾಕ್ಷಿ ಹೊಸಮನೆ, ಜಯಂತ ಪೂಜಾರಿ ಕಲ್ಯಾರು ಅವರನ್ನು ನೇಮಿಸಲಾಯಿತು.