https://bantwalnews.com report
ಸಾಲೆತ್ತೂರು ಸಮೀಪ ಐವರನ್ನು ಕೃತ್ಯಕ್ಕೆ ಬಳಸಿದ ಇನ್ನೋವ ಕಾರು, ಆಲ್ಟೊ ಕಾರು, ಹತ್ಯಾರುಗಳ ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಪೈವಳಿಕೆ ವಾಸಿ ಶಾಫಿ ಯಾನೆ ಕಲಂದರ್ ಯಾನೆ ಎಂಎಲ್ ಎ ಶಾಫಿ, ಕೇರಳದ ಶಾಫಿ ಯಾನೆ ಚೋಟು ಶಾಫಿ, ಮಿತ್ತನಡ್ಕ ಹ್ಯಾರಿಸ್ ಸಹಿತ ಕೆಲವರಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ.
ಘಟನೆ ವಿವರ:
ಅರಸಳಿಕೆ ನಿವಾಸಿ ವಿಘ್ನರಾಜ ಭಟ್ (47) ಹಾಗೂ ಅವರ ಸಂಬಂಧಿ ವಿಖ್ಯಾತ್(18) ಮನೆಯಲ್ಲಿ ನಿದ್ರೆಯಲ್ಲಿದ್ದ ವೇಳೆ ಸುಮಾರು ರಾತ್ರಿ 2.30ರ ವೇಳೆ ನಾಯಿ ಬೊಗಳಿದ ಶಬ್ದ ಕೇಳಿತು. ಇಬ್ಬರೂ ಎಚ್ಚರಗೊಂಡಾಗ, ಓರ್ವ ಬಾಗಿಲು ಮುರಿದು ಒಳಗೆ ನುಗ್ಗಿದ. ಇದರಿಂದ ಭಯಭೀತರಾದ ಅವರು ಬೊಬ್ಬೆ ಹೊಡೆದಾಗ ಮತ್ತೆ ಮೂರು ನಾಲ್ಕು ಮಂದಿ ಒಳಗೆ ಬಂದರು. ಇಬ್ಬರನ್ನೂ ಮನೆಯೊಳಗೆ ಹಗ್ಗದಲ್ಲಿ ಕಟ್ಟಿ ಕೂಡಿ ಹಾಕಿದರು.ಬಳಿಕ ಮನೆಯ ಅಂಗಳದ ಗೇಟಿನ ಪಕ್ಕದಲ್ಲಿರುವ ಭೂಮಿಯನ್ನು ಅಗೆದು ನಿಧಿಗಾಗಿ ವಿಫಲ ಯತ್ನ ನಡೆಸಿದ್ದರು. ಸುಮಾರು 9ರಿಂದ 12 ಮಂದಿಯಷ್ಟಿದ್ದ ತಂಡ, ಪಿಸ್ತೂಲ್, ತಲವಾರು, ಕಬ್ಬಿಣದ ರಾಡ್ ಹಿಡಿದುಕೊಂಡು ಬಂದಿದ್ದರು. ಎರಡು ಕಾರುಗಳಲ್ಲಿ ಈ ತಂಡ ಬಂದಿತ್ತು. ಸುಮಾರು ಎರಡು ಗಂಟೆ ನಿಧಿಗಾಗಿ ಭೂಮಿ ಅಗೆದರು. ಬೆಳಗ್ಗೆ ಸುಮಾರು 4.30 ಆಗುತ್ತಿದ್ದಂತೆ ಮರಳಿದರು. ಬರಿಗೈಯಲ್ಲಿ ಮರಳದ ಆಗಂತುಕರು, ಪೊಲೀಸರಿಗೆ ಸುಳಿವು ಸಿಗಬಾರದು ಎಂದು ಸಿಸಿ ಕ್ಯಾಮಾರದ ಡಿವಿಆರ್ ಹಾಗೂ ಎರಡು ಮೊಬೈಲ್‌ನಲ್ಲಿದ್ದ ನಾಲ್ಕು ಸಿಮ್‌ಗಳನ್ನು ಕದ್ದಿದ್ದರು. ವಿಷಯ ತಿಳಿಯುತ್ತಿದ್ದಂತೆ ದ.ಕ ಜಿಲ್ಲಾ ಎಸ್.ಪಿ ಭೂಷಣ್ ರಾವ್ ಬೊರಸೆ, ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿ.ಆರ್, ವಿಟ್ಲ ಎಸೈ ನಾಗರಾಜ್, ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಪೊಲೀಸ್ ತಂಡ ಭೇಟಿ ನೀಡಿತ್ತು ಅರಸಳಿಕೆಯ ಈ ಮನೆಯಲ್ಲಿ ನಿಧಿಗಾಗಿ ಶೋಧ ನಡೆಯುತ್ತಿರುವುದು ಒಂದೆರಡು ಬಾರಿಯಲ್ಲ. ಆರು ಬಾರಿ ಇಲ್ಲಿ ನಿಧಿ ಶೋಧ ನಡೆದಿತ್ತು. ಆದರೆ ಯಾರಿಗೂ ಏನೂ ಸಿಕ್ಕಿರಲಿಲ್ಲ. ಹೀಗಾಗಿ ಈ ಕುರಿತು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆ ಕೋರಿದ್ದರು. ಪೊಲೀಸರು ಅವರಿಗೆ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಿದ್ದರು. ಆದರೂ ಕಳ್ಳರು ಜಾಣ್ಮೆ ಮೆರೆದು ಸಿಸಿ ಕ್ಯಾಮರಾದ ಡಿವಿಆರ್ ಅನ್ನೇ ಹೊತ್ತೊಯ್ದಿದ್ದರು.
ಹೇಗೆ ತನಿಖೆ:
ಈ ತಂಡ ವಿವಿದ ಆಯಾಮಗಳಿಂದ ತನಿಖೆ ನಡೆಸಿ ಕೇರಳ ರಾಜ್ಯ ದ ಕಾಸರಗೋಡು, ಕುಂಬಳೆ, ಪೈವಳಿಕೆ, ಮಂಜೇಶ್ವರ, ಕಡೆಗಳಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಶನಿವಾರ ಖಚಿತ ವರ್ತಮಾನದಂತೆ ಸಾಲೆತ್ತೂರು ಸಮೀಪ ಕೃತ್ಯಕ್ಕೆ ಉಪಯೋಗಿಸಿದ ಇನೋವಾ ಕಾರು , ಆಲ್ಟೋ ಕಾರು , ಹತ್ಯಾರುಗಳು ಸಮೇತ 5 ಜನ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾದರು.
ಕ್ರಿಮಿನಲ್ ಹಿನ್ನೆಲೆ ಉಳ್ಳವರು
ಕೃತ್ಯದಲ್ಲಿ ಭಾಗಿಯಾದವರು ಸಾಮಾನ್ಯರೇನಲ್ಲ. ಕೊಲೆಯಂಥ ಕೃತ್ಯಗಳ ಆರೋಪ ಇರುವ ಕ್ರಿಮಿನಲ್ ಹಿನ್ನೆಲೆ ಉಳ್ಳವರು. ಇಕ್ಬಾಲ್ ಯಾನೆ ಇಕ್ಕು ಮೇಲೆ ವಿಟ್ಲ ಪೊಲಿಸ್ ಠಾಣೆಯಲ್ಲಿ 2015 ರಲ್ಲಿ ಯುವತಿಯೊಬ್ಬಳನ್ನು ಅಪಹರಿಸಿದ ಪ್ರಕರಣ ಮತ್ತು ಕನ್ಯಾನದಲ್ಲಿ ನಡೆದ ಆಸೀಪ್ ಯಾನೆ ಬಾಯಿಕಟ್ಟೆ ಆಸೀಪ್ ಕೊಲೆ ಪ್ರಕರಣದಲ್ಲಿ ಹಾಗೂ 2016 ರಲ್ಲಿ ಮಂಗಳುರು ಜಿಲ್ಲಾ ಕಾರಾಗ್ರಹದಲ್ಲಿರುವ ಸಮಯ ಜೈಲಿನೊಳಗಡೆ ನಡೆದ ಗಣೇಶ್ ಶೆಟ್ಟಿ ಕೊಲೆ ಪ್ರಕರಣದ ಆರೋಪವಿದೆ.
ಮಹಮ್ಮದ್ ಆಲಿ ಯಾನೆ ಅಲಿ ಮೋನು ಮೇಲೆ 2011 ರಲ್ಲಿ ವಿಟ್ಲ ಠಾಣೆಯಲ್ಲಿ ಒಂದು ಗಲಾಟೆ ಪ್ರಕರಣ , ಮತ್ತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ , 2015 ನೇ ಇಸವಿಯಲ್ಲಿ ಕನ್ಯಾನದಲ್ಲಿ ನಡೆದ ಆಸೀಪ್ ಯಾನೆ ಬಾಯಿಕಟ್ಟೆ ಆಸೀಪ್ ಕೊಲೆ ಪ್ರಕರಣದಲ್ಲಿ, ಪಾಂಡೇಶ್ವರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣಗಳ ಆರೋಪಿ. ಪ್ರಕರಣ ಬೇಧಿಸುವ ತಂಡಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಶಂಸನಸ ಪತ್ರ ಮತ್ತು ನಗದು ಬಹುಮಾನ ಘೋಷಿಸಿದ್ದಾರೆ.