ಜೇಸಿಐ ಇಂಡಿಯಾದ ಅತ್ಯುನ್ನತ ಪ್ರಶಸ್ತಿಯಾದ ಔಟ್ ಸ್ಟಾಂಡಿಂಗ್ ನ್ಯಾಷನಲ್ ಎವಾರ್ಡ್ ವಿನ್ನರ್ ಪ್ರಶಸ್ತಿಯು ವಿಟ್ಲ ಜೆಸಿಐ 2016 ರ ಅಧ್ಯಕ್ಷ ಬಾಬು ಕೆ ವಿ ಯವರಿಗೆ ಲಬಿಸಿರುತ್ತದೆ. ಬೆಂಗಳೂರಿನ ದೇವನಹಳ್ಳಿ ಜೆಸಿಐಯ ಆತಿಥ್ಯದಲ್ಲಿ ನಡೆದ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಜೇಸಿಐ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷೆ ರಾಜಶ್ರೀ ಬಜೆ ಯವರು ಈ ಪ್ರಶಸ್ತಿ ನೀಡಿ ಗೌರವಿಸಿದರು.
2016 ರಲ್ಲಿ ವಿಟ್ಲದ ಶಾಲಾ ಕಾಲೇಜುಗಳಿಗೆ ನೀಡಿದ ಕೊಡುಗೆಗಳು, ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿದ ಬಸ್ ಶಲ್ಟರ್, ಬಡವರಿಗೆ ಮನೆ ನಿರ್ಮಾಣ, ಭಾರತದ ಜೇಸಿಐ ಸಂಸ್ಥೆಗೆ ನೀಡಿದ ದೇಣಿಗೆ, ವಿಟ್ಲ ಘಟಕಕ್ಕೆ ಹೊಸ ಸದಸ್ಯರ ಸೇರ್ಪಡೆ ಹಾಗೂ ಇತರ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಗಣಿಸಿ ಹಾಗೂ ಇತರ ಕಡೆಗಳಲ್ಲಿ ಮೂರು ಹೊಸ ಘಟಕಗಳನ್ನು ಸ್ಥಾಪಿಸಿದ್ದಕ್ಕಾಗಿ ಈ ಪ್ರಶಸ್ತಿ. ವಿಟ್ಲ ಜೇಸೀಐ ಗೆ 36 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಔಟ್ ಸ್ಟಾಂಡಿಂಗ್ ನ್ಯಾಷನಲ್ ಎವಾರ್ಡ್ ವಿನ್ನರ್ ಪ್ರಶಸ್ತಿ ಲಬಿಸಿರುತ್ತದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…