ಎಸ್‌ವಿಎಸ್ ಕಾಲೇಜಿನ ಸುವರ್ಣಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ಫೆ.1ರಂದು ನಡೆಯಲಿದ್ದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸಲಿದ್ದು ಕಾಲೇಜಿನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಉಪಸ್ಥಿತರಿರುವರು.
ಫೆ.2ರಂದು ಪ್ರತಿಭಾ ಪುರಸ್ಕಾರ ದಿನದಂದು ಮಣಿಪಾಲ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥೆ ಡಾ. ಪೂರ್ಣಿಮಾ ಬಾಳಿಗಾ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಫೆ. 3ರಂದು 49ನೇ ಕಾಲೇಜು ವಾರ್ಷಿಕೋತ್ಸವದ ಸಂಭ್ರಮವಾದ್ದರಿಂದ ಮುಖ್ಯ ಅತಿಥಿಯಾಗಿ ಮಂಗಳೂರು ವಲಯದ ಖಾಸಗಿ ಕಾಲೇಜು ಆಡಳಿತ ಸಂಘದ ಕಾರ್ಯದರ್ಶಿ ಪ್ರೋ. ವೈ. ಭಾಸ್ಕರ್ ಶೆಟ್ಟಿ ಹಾಗೂ ಕರ್ನಾಟಕ ಸರಕಾರದ ನಗರ ಅಭಿವೃದ್ದಿ ಶಾಖೆಯ ಕೋಶಾಧಿಕಾರಿ ಕೆ.ಎ. ಹಿದಾಯತುಲ್ಲಾ ಅತಿಥಿಗಳಾಗಿ ಅಗಮಿಸಲಿದ್ದಾರೆ.
ಫೆ.4ರಂದು ವಿದ್ಯಾರ್ಥಿ ಸಂಘ ದಿನಾಚರಣೆಯ ಪ್ರಯುಕ್ತ ಪುತ್ತೂರಿನ ಯಕ್ಷಗಾನ ಕಲಾವಿದ ಜಬ್ಬಾರ್ ಸಮೊ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು ಹಾಗೂ ಕಾಲೇಜಿನ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಲಿರುವರು ಎಂದು ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪಾಡುರಂಗ ನಾಯಕ್ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಿಕಲಾ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.