ನವಚೇತನಾ ಸೇವಾ ಟ್ರಸ್ಟ್ ಬಂಟ್ವಾಳ ವತಿಯಿಂದ ದ.ಕ, ಕಾಸರಗೋಡು, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು,ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಆದಿದ್ರಾವಿಡ ವಧೂವರರ ಅನ್ವೇಷಣೆ (ಪೊದು ಸಂಧಾನ) ಫೆ.26ರಂದು ಬೆಳಗ್ಗೆ 10ರಿಂದ ಸಂಜೆ 5ವರೆಗೆ ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ನಲ್ಲಿ ನಡೆಯುವುದು.
ಇದರಲ್ಲಿ ಆದಿದ್ರಾವಿಡ ಜಾತಿಯ ವಧೂವರರಿಗೆ ಮತ್ತು ಅವರ ಕುಟುಂಬಸ್ಥರಿಗೆ ಮಾತ್ರ ಭಾಗವಹಿಸಲು ಅವಕಾಶ. ಇತರರಿಗೆ ಅವಕಾಶ ಇರುವುದಿಲ್ಲ. ಒಂದು ಮನೆಯಲ್ಲಿ 18 ವರ್ಷ ಮೇಲ್ಪಟ್ಟು ಹೆಣ್ಣುಮಗಳು 21 ವರ್ಷ ಮೇಲ್ಪಟ್ಟ ಗಂಡು ಇದ್ದರೆ, ಇವತ್ತಿನವರೆಗೆ ಯಾವುದೇ ಹೆಣ್ಣು ನೋಡುವ ಅಥವಾ ಗಂಡು ನೋಡುವ ಅನ್ವೇಷಣೆ ನಡೆಯದೇ ಇದ್ದರೆ ಇಲ್ಲಿ ಭಾಗವಹಿಸಬಹುದು ಎಂದು ಕಾರ್ಯಕ್ರಮದ ರೂವಾರಿ ನವಚೇತನಾ ಸೇವಾ ಟ್ರಸ್ಟ್ ಅಧ್ಯಕ್ಷ ರಾಜ ಪಲ್ಲಮಜಲು ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫುಲ್ ಸೈಜ್ ಎರಡು ಪ್ರತಿ ಭಾವಚಿತ್ರ,ವಯಸ್ಸಿನ ದೃಢಪತ್ರ ಶಾಲಾ ಸರ್ಟಿಫಿಕೇಟ್, ಜಾತಿ ಪ್ರಮಾಣಪತ್ರ, ತಂದೆ ತಾಯಿಯ ಬಳಿ(ಬರಿ), ಉದ್ಯೋಗದ ವಿವರವನ್ನು ಫೆ.5ರಿಂದ ಫೆ.19ರ ಸಂಜೆ 5ರೊಳಗೆ ನವಚೇತನಾ ಸೇವಾ ಟ್ರಸ್ಟ್ ಕಚೇರಿ, ಹಳೇ ತಾಲೂಕು ಪಂಚಾಯಿತಿ ಕಟ್ಟಡ, ಪತ್ರಿಕಾ ಭವನದ ಬಳಿ, ಬಿ.ಸಿ.ರೋಡ್ ಇಲ್ಲಿ ಹೆಸರು ನೋಂದಾಯಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮೋಹನ ಬಡಗಬೆಳ್ಳೂರು, ಡೊಂಬಯ್ಯ ಅಮ್ಯಲ್, ಸದಾಶಿವ ಕಟ್ಟೆಮಾರ್ ಮೊದಲಾದವರು ಉಪಸ್ಥಿತರಿದ್ದರು.