ಅಪನಂಬಿಕೆ, ಅವಿಶ್ವಾಸಗಳು ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರಲ್ಲೂ ಆತ್ಮಶುದ್ದೀಕರಣವಾಗುವ ಕೆಲಸ ಆಗಬೇಕು, ದೇವಸ್ಥಾನದ ಬ್ರಹ್ಮಕಲಶವಾಗುವಂತೆ ಆತ್ಮದ ಬ್ರಹ್ಮಕಲಶ ಆಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದಾಲಯ ಬಿ.ಸಿ.ರೋಡು ಇದರ ಸೇವಾ ಕೇಂದ್ರದ ನೀತನ ಕಟ್ಟಡ ಶಿವಜ್ಯೋತಿ ಭವನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವರಿಷ್ಠ ರಾಜಯೋಗ ಶಿಕ್ಷಕಿ ಶಕುಂತಲಜೀ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ತಹಶೀಲ್ದಾರ್ ಪುರಂದರ ಹೆಗ್ಡೆ, ಉದ್ಯಮಿ ಐತಪ್ಪ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಿ.ಸಿ.ರೋಡು ಕೇಂದ್ರದ ಸಂಯೋಜಕ ರಾಜಯೋಗಿ ಬ್ರ.ಕು. ಗಣಪತಿ ಭಟ್ ಸ್ವಾಗತಿಸಿದರು, ವಿಶ್ವೇಶ್ವರೀ ಈಶ್ವರೀಯ ಸಂದೇಶ ನೀಡಿದರು. ಶಾಂತಕ್ಕ ಪಯ್ಯನ್ನೂರು ಕಾರ್ಯಕ್ರಮ ನಿರೂಪಿಸಿದರು. ಕಟ್ಟಡ ದಾನಿ ಸುಶೀಲ, ಬಿ.ಸಿರೋಡು ಸೇವಾಕೆಂದ್ರದ ಸಂಚಾಲಿಕೆ ಸಾವಿತ್ರಿ, ಗಣಪತಿ ಭಟ್ ಹಾಗೂ ಶಾರದಮ್ಮ ಸಿಂಧನೂರು ಅವರನ್ನು ಸನ್ಮಾನಿಸಲಾಯಿತು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…