ಇದನ್ನು ಬರೆಯುವ ಹೊತ್ತಿನಲ್ಲಿ Bantwalnews.com ಆರಂಭಗೊಂಡು 75 ದಿನಗಳಾದವು.
ಸುದ್ದಿ ಕೊಡುವ ಅಸಂಖ್ಯ ಜಾಲತಾಣಗಳ ಮಧ್ಯೆ ಬಂಟ್ವಾಳನ್ಯೂಸ್ ಆರಂಭಗೊಂಡಾಗ ಹತ್ತರೊಟ್ಟಿಗೆ ಹನ್ನೊಂದು ಎಂಬಂತೆ ನೋಡಿದವರೂ ಇದ್ದಾರೆ. ಆದರೆ ಪ್ರತಿದಿನವೂ ಕ್ಲಿಕ್ ಮಾಡ್ತಾರೆ ಎಂಬುದಕ್ಕೆ ಸಾಕ್ಷಿ ಈ ಲೆಕ್ಕ. 1,02,000 ಓದುಗರು ಇದುವರೆಗೆ ಈ ವೆಬ್ ಸೈಟ್ ಕ್ಲಿಕ್ ಮಾಡಿ ಇಲ್ಲಿನ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ, ಓದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ವಿಶೇಷವಾಗಿ ದೇಶ, ವಿದೇಶಗಳಲ್ಲಿರುವ ಸ್ನೇಹಿತರನ್ನೊಳಗೊಂಡಂತೆ ಹಲವಾರು ಮಂದಿ ಬಂಟ್ವಾಳ ತಾಲೂಕಿನ ಸುದ್ದಿಗಳ ದೈನಂದಿನ ಅಪ್ ಡೇಟ್ ಕಂಡು ಮೆಚ್ಚಿದ್ದಾರೆ. ಇಷ್ಟು ಅಗಾಧ ಬೆಂಬಲ ದೊರಕುತ್ತಿದೆ ಎಂದರೆ ಬಂಟ್ವಾಳನ್ಯೂಸ್ ನಿಧಾನವಾಗಿ ಹೆಜ್ಜೆಯೂರುತ್ತಿದೆ ಎಂದರ್ಥ. ಅಂದದ ವೆಬ್ ಡಿಸೈನ್ ಮಾಡಿದ ಆದಿತ್ಯ ಕಲ್ಲೂರಾಯ, ಕಾಲಕಾಲಕ್ಕೆ ಸಲಹೆ ಸೂಚನೆ ಕೊಡುತ್ತಿರುವ ಹಿರಿಯ, ಕಿರಿಯ ಪತ್ರಕರ್ತ ಮಿತ್ರರು, ಕಾಲಂಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವ ಡಾ.ಅಜಕ್ಕಳ ಗಿರೀಶ್ ಭಟ್, ಅನಿತಾ ನರೇಶ್ ಮಂಚಿ, ಬಿ.ತಮ್ಮಯ್ಯ, ಡಾ.ರವಿಶಂಕರ್, ಮೌನೇಶ ವಿಶ್ವಕರ್ಮ, ತೆರೆಮರೆಯಲ್ಲಿದ್ದು ಪ್ರೋತ್ಸಾಹಿಸುತ್ತಿರುವ ಹಲವಾರು ಬಂಧುಗಳು, ಓದುಗರು ಹಾಗೂ ಆರ್ಥಿಕವಾಗಿ ಗಟ್ಟಿಯಾಗಲು ನೆರವಾದ ಜಾಹೀರಾತುದಾರರಿಗೆ ಈ ಮೂಲಕ ನನ್ನ ಹೃದಯಾಂತರಾಳದ ಕೃತಜ್ಞತೆ. ತಾಲೂಕಿನ ಸುದ್ದಿಗಳನ್ನಷ್ಟೇ ಕೇಂದ್ರೀಕೃತವಾಗಿಸಿ ಆರಂಭಗೊಂಡ ಬಂಟ್ವಾಳನ್ಯೂಸ್ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಘಟನಾವಳಿಯನ್ನೂ ಒದಗಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆಲ್ಲ ನಿಮ್ಮ ಹಾರೈಕೆ, ಪ್ರೋತ್ಸಾಹ ಎಂದಿನಂತೆ ಇರಲಿ.
ಇಂತೀ ನಿಮ್ಮವ – ಹರೀಶ ಮಾಂಬಾಡಿ 9448548127