ಬಂಟ್ವಾಳನ್ಯೂಸ್ ವರದಿ
ಮೇಲ್ಕಾರಿನಲ್ಲಿ ಮತ್ತೊಂದು ಅಪಘಾತ ನಡೆದಿದೆ. ಶುಕ್ರವಾರ ಸಂಜೆ ಇನ್ಫೋಸಿಸ್ ಸಂಸ್ಥೆಯ ಕಾವಲುಗಾರನಾಗಿ ದುಡಿಯುವ ಮೋಹನ್ ಮಂಜಪ್ಪ ರೈ(50) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇವರು ಕೊಡಗು ಜಿಲ್ಲೆಯ ವೀರಾಜಪೇಟೆ ನಿವಾಸಿ. ಹಲವು ಸಮಯದಿಂದ ತಾಲೂಕಿನ ಇರಾ ಗ್ರಾಮದ ಕುರಿಯಾಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು ಮುಡಿಪುವಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಕಾವಲುಗಾರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ತನ್ನ ಭಾವನೊಂದಿಗೆ ಉಪ್ಪಿನಂಗಡಿಗೆ ಸಂಬಂಧಿಕರೊಬ್ಬರ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡು ವಾಪಸ್ ಇರಾಕ್ಕೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಮೆಲ್ಕಾರ್‌ನಲ್ಲಿ ತನ್ನ ಕಾರು ನಿಲ್ಲಿಸಿ ಪೇಟೆಯಿಂದ ಸಾಮಾನು ಖರೀದಿಸಿ ತನ್ನ ಕಾರಿನತ್ತ ತೆರಳುದ್ದಾಗ ಮಾರ್ನಬೈಲ್ ಕಡೆಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ದ್ವಿಚಕ್ರ ಮೋಹನ್ ರೈ ಅವರಿಗೆ ಢಿಕ್ಕಿ ಹೊಡೆದಿದೆ ಎಂದು ಅವರ ಭಾವ ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ವಾಹನ ಢಿಕ್ಕಿ ಹೊಡೆದ ಪರಿಣಾಮ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡ ಮೋಹನ್ ರೈ ಅವರನ್ನು ಕೂಡಾಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು ಅದಾಗಲೇ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್‌ಗಳ ನಿಲುಗಡೆಗೆ ಇಲ್ಲಿ ಬಸ್‌ಬೇ ನಿರ್ಮಿಸಲಾಗಿದ್ದರೂ ಯಾವುದೇ ಬಸ್‌ಗಳು ಇಲ್ಲಿ ನಿಲ್ಲದೆ ನಡುರಸ್ತೆಯಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿ ಇಳಿಸುತ್ತಿದೆ.
ಇತರ ವಾಹನಗಳನ್ನು ಕೂಡಾ ರಸ್ತೆ ಬದಿಯಲ್ಲೇ ನಿಲ್ಲಿಸಲಾಗುತ್ತಿದೆ. ರಸ್ತೆ ಅಗಲೀಕರಣವಾದರೂ ಪಾರ್ಕಿಂಗ್ ವ್ಯವಸ್ಥೆ ಇನ್ನೂ ಸರಿಯಾಗದಿರುವುದರಿಂದ ವಾಹನ ದಟ್ಟನೆಯಿಂದಾಗಿ ಅಪಘಾತ ವಲಯವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…