ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿ ಮಹಾವಿದ್ಯಾಲಯದ ರೆಡ್ರಿಬ್ಬನ್ ಕ್ಲಬ್, ಎನ್.ಎಸ್.ಎಸ್, ಎನ್.ಸಿ.ಸಿ, ರೋವರ್ಸ್ ಆಂಡ್ ರೇಂಜರ್ಸ್. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮತ್ತು ಕೆ.ಎಂ.ಸಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು. ಮಂಗಳೂರು ಕೆಎಂಸಿ ವೈದ್ಯಾಧಿಕಾರಿ ಡಾ. ಸೋನಾಲಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ವಹಿಸಿ, ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ, ಆದ್ದರಿಂದ ಅರ್ಹರೆಲ್ಲರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ, ಜೀವ ಉಳಿಸಿ ಎಂದು ಕರೆಯಿತ್ತರು. ಎನ್.ಎಸ್.ಎಸ್ ಯೋಜನಾಧಿಕಾರಿ ಪ್ರೊ.ನಾರಾಯಣ ಭಂಡಾರಿ ಸ್ವಾಗತಿಸಿ, ಎನ್.ಸಿ.ಸಿ ಅಧಿಕಾರಿ ಲೆ| ಸುಂದರ್ ವಂದಿಸಿದರು.
ವೇದಿಕೆಯಲ್ಲಿ ರೆಡ್ ರಿಬ್ಬನ್ ಅಧ್ಯಕ್ಷ ಹಾಗೂ ಎನ್.ಎಸ್.ಎಸ್ ಅಧಿಕಾರಿಯೂ ಆಗಿರುವ ಕಿಟ್ಟು ರಾಮಕುಂಜ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕು.ಪ್ರಗತಿ ಮತ್ತು ಕು.ಶ್ರೇಯಾ ಪ್ರಾರ್ಥಿಸಿ, ಶ್ರೀ ಸುದರ್ಶನ್ ಡಿ.ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.